ಬುಧವಾರ, ಏಪ್ರಿಲ್ 14, 2021
23 °C

ಆನೆ ದಂತ ಮಾರಾಟ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ತಮಿಳುನಾಡಿನ ನಾಲ್ವರನ್ನು ಜಾಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೊಯಮತ್ತೂರಿನ ಉನ್ನಿಕೃಷ್ಣನ್‌ (35), ಚೆನ್ನೈಯ ಜಯಶೀಲನ್‌ (38), ಸೇಲಂನ ಮಾದೇಶ್ವರನ್‌ (59) ಮತ್ತು ಈರೂರಿನ ವಿಜಯ್‌ (37) ಬಂಧಿತರು. ಆರೋಪಿಗಳಿಂದ ಎಂಟು ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಇಬ್ಬರು (ಉನ್ನಿಕೃಷ್ಣನ್‌ ಮತ್ತು ಜಯಶೀಲನ್‌) ಗೋಣಿ ಚೀಲದಲ್ಲಿ ದಂತಗಳನ್ನು ತುಂಬಿಕೊಂಡು ಕಾಳಿಂಗ ರಾವ್ ವೃತ್ತದ ಬಳಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ‌‌ಅವರಿಬ್ಬರನ್ನೂ ವಿಚಾರಣೆ ನಡೆಸಿದಾಗ, ತಮಗೆ ಆನೆ ದಂತಗಳನ್ನು ಮಾದೇಶ್ವರನ್‌ ಮತ್ತು ‌ವಿಜಯ್‌ ತಂದುಕೊಡುತ್ತಿದ್ದರೆಂದು ತಿಳಿಸಿದರು’ ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು