ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಪೂರೈಕೆದಾರರ ಒಕ್ಕೂಟಕ್ಕೆ ಚಾಲನೆ

Last Updated 25 ಮಾರ್ಚ್ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು:ಅಸಂಘಟಿತ ವಲಯದ ಆಹಾರ ಪೂರೈಕೆದಾರರನ್ನು ಸಂಘಟಿಸುವ ಸಲುವಾಗಿ ರಚಿಸಿರುವ ‘ಕರ್ನಾಟಕ ಆಹಾರ ಪೂರೈಕೆದಾರರ ಒಕ್ಕೂಟ’ಕ್ಕೆ ರಾಜ್ಯಪಾಲ ವಜುಭಾಯಿ ವಾಲಾಸೋಮವಾರ ಚಾಲನೆ ನೀಡಿದರು.

ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಪಂಕಜ್ ಕೊಠಾರಿ ಮಾತನಾಡಿ, ‘ಶುಚಿಯಾದ ಆಹಾರ ಹಾಗೂ ಅತ್ಯುತ್ತಮ ಸೇವೆ ಒದಗಿಸುವುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚೆಚ್ಚು ಉದ್ಯೋಗಾವಕಾಶಗಳು ದೊರೆಯುವಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಹೇಳಿದರು.

‘ಒಕ್ಕೂಟವು ಆಹಾರ ಸುರಕ್ಷತಾ ಕಾಯ್ದೆ ಜಾರಿ ಹಾಗೂ ಪಾಲನೆಯಲ್ಲಿನ ತೊಂದರೆಗಳ ಕುರಿತು ಸದ್ಯದಲ್ಲೇಸರ್ಕಾರಕ್ಕೆ ಮನವಿ ಸಲ್ಲಿಸಲಿದೆ. ಶೇಕಡ 18ರಷ್ಟಿರುವ ಜಿಎಸ್‍ಟಿಯನ್ನು ಶೇಕಡ 5ಕ್ಕೆ ಇಳಿಸುವಂತೆ ಬೇಡಿಕೆ ಇಡಲಿದೆ. ಆಹಾರ ಉತ್ಪನ್ನಗಳ ಮೇಲೆ ನ್ಯಾಯಯುತ ಬೆಲೆ ನಿಗದಿಪಡಿಸಲು ನೇರವಾಗಿ ರೈತರಿಂದಲೇ ವಸ್ತುಗಳನ್ನು ಖರೀದಿ ಮಾಡಬಲ್ಲ ವ್ಯವಸ್ಥೆ ರೂಪಿಸುವಂತೆಯೂ ಪ್ರಸ್ತಾವನೆಯನ್ನು ಸಲ್ಲಿಸಲಿದೆ’ ಎಂದರು.

‘ಒಕ್ಕೂಟವು ರಾಜ್ಯದ ಕೇಟರರ್‌ಗಳ ಅಗತ್ಯ ಹಾಗೂ ಬೇಡಿಕೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT