ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಶಾಲೆಯ ಮಕ್ಕಳಿಗೆ ಆತಿಥ್ಯ

Last Updated 18 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ವೈಟ್‌ಫೀಲ್ಡ್‌ ಬಳಿ ಇರುವ ಕೀ ಹೋಟೆಲ್‌ ವಿವಿಧ ಬಗೆಯ ಅಂಗವಿಕಲ ಮಕ್ಕಳ ಮೊಗದಲ್ಲಿ ಸಂಭ್ರಮ ಮೂಡಿಸುವುದರೊಂದಿಗೆ ವ್ಯಾಲೆಂಟೈನ್ ದಿನವನ್ನು ಗುರುವಾರ ಆಚರಿಸಿತು.

ಕಾಟನ್‍ಲೆಂಗೊ ವಿಶೇಷ ಶಾಲೆಯ ಮಕ್ಕಳನ್ನು ಹೋಟೆಲ್‌ಗೆ ಆಹ್ವಾನಿಸಿ ಅವರಿಗೆ ಬಫೆ ಭೋಜನ ಮತ್ತು ಮ್ಯಾಜಿಕ್ ಶೋ, ಡಾನ್ಸ್ ಶೋ ಮತ್ತು ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಫನ್ ಪೋಟೊ ಬೂತ್‍ಗಳ ಮೋಜಿನ ಆನಂದವನ್ನು ನೀಡಲಾಯಿತು.

ಜೊತೆಗೆ ಮಕ್ಕಳಿಗೆ ಉತ್ಸಾಹಪೂರ್ಣ ಕೊಡುಗೆಗಳನ್ನು ನೀಡಲಾಯಿತು. ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಡಯಾನಾ ಈರಪ್ಪ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ವ್ಯಾಲೆಂಟೈನ್ ತಿಂಗಳುದ್ದಕ್ಕೂ ಹೋಟೆಲ್‌ ವಿಶೇಷ ಭೋಜನ ಮತ್ತು ಕೊಡುಗೆಗಳನ್ನು ನೀಡುತ್ತದೆ.

ಕೀ ಹೋಟೆಲ್‌ ಕಾರ್ಪೋರೇಟ್ ಶೆಫ್ ಮನೀಶ್ ಕುಸುಮ್‍ವಾಲ್ ಮಾತನಾಡಿ, ಮಕ್ಕಳು ಈ ಕಾರ್ಯಕ್ರಮವನ್ನು ನೆನಪಿನಲ್ಲಿಡುವಂತೆ ಮಿನಿ ಕಾರ್ನಿವಾಲ್ ಅನುಭವವನ್ನು ಸೃಷ್ಟಿಸುವುದು ನಮ್ಮ ಚಿಂತನೆಯಾಗಿತ್ತು. ಮಕ್ಕಳು ಸ್ಟಾರ್ಟರ್‍ಗಳು, ಮೇನ್ ಕೋರ್ಸ್, ಡೆಸರ್ಟ್‍ಗಳು, ಅಪ್ಪಮ್ ಕೌಂಟರ್ ಮುಂತಾದವುಗಳನ್ನು ಆನಂದಿಸಿದರು ಎಂದರು.

ಕೀಸ್ ಹೋಟೆಲ್ಸ್‍ನ ಕಾರ್ಯಾಚರಣೆ ನಿರ್ದೇಶಕರಾದ ರೋಷನ್ ಉಚಿಲ್ ಅವರು ಮಾತನಾಡಿ, ‘ಮಕ್ಕಳು ನೈಜ ಮೋಜು ಹೊಂದುವುದನ್ನು ನೋಡುವುದು ನಮಗೆ ಆನಂದದ ವಿಷಯವಾಗಿತ್ತು. ಭವಿಷ್ಯದ ಈ ಪುಟ್ಟ ಮನಸ್ಸುಗಳಿಗೆ ಈ ಕಾರ್ಯಕ್ರಮ ಸದಾ ಪ್ರೀತಿಯಿಂದ ನೆನಪಿನಲ್ಲಿಡುವಂತಾಗುವ ಭರವಸೆ ನಮ್ಮದು ಎಂದು ಹೇಳಿದರು.

ರೂಪದರ್ಶಿ ಮತ್ತು ನಟಿ ಡಯಾನಾ ಈರಪ್ಪ ಅವರು ಮಾತನಾಡಿ, ಇದು ನನ್ನ ಅತ್ಯುತ್ತಮ ವ್ಯಾಲೆಂಟೈನ್ ದಿನ. ಇತರರು ಕೂಡ ಇದರಿಂದ ಸ್ಫೂರ್ತಿ ಪಡೆದು ಇದೇ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡು ಮಾದರಿಯಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT