ಗುತ್ತಿಗೆ ಆಟೊ ಟಿಪ್ಪರ್ ಚಾಲಕರ ಪ್ರತಿಭಟನೆ

ಬುಧವಾರ, ಮಾರ್ಚ್ 20, 2019
25 °C

ಗುತ್ತಿಗೆ ಆಟೊ ಟಿಪ್ಪರ್ ಚಾಲಕರ ಪ್ರತಿಭಟನೆ

Published:
Updated:
Prajavani

ಹುಬ್ಬಳ್ಳಿ: ಗುತ್ತಿಗೆದಾರರು ಐದು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಹೊರಗುತ್ತಿಗೆ ಪೌರ ವಾಹನ ಚಾಲಕರ ಸಂಘದ ಸದಸ್ಯರು ಪಾಲಿಕೆ ಕೇಂದ್ರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂಬಳ ನೀಡದ ಕಾರಣ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪಾಲಿಕೆ ಆಧಿಕಾರಿಗಳನ್ನು ಕೇಳಿದರೆ ಗುತ್ತಿಗೆದಾರರನ್ನು ಕೇಳಿ ಎನ್ನುತ್ತಾರೆ, ಗುತ್ತಿಗೆದಾರರು ವೇತನ ನೀಡುತ್ತಿಲ್ಲ. ವಾಹನಗಳು ಸಣ್ಣಪುಟ್ಟ ರಿಪೇರಿಗೆ ಬಂದರೆ ನಾವೇ ಖರ್ಚು ಮಾಡಿ ರಿಪೇರಿ ಮಾಡಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆದಾರರು ಇಎಸ್‌ಐ ಹಾಗೂ ಪಿಎಫ್ ಸೌಲಭ್ಯ ನೀಡಿಲ್ಲ. ಅನಾರೋಗ್ಯ ಮತ್ತು ತುರ್ತು ಸಂದರ್ಭಗಳಲ್ಲಿ ರಜೆಯನ್ನು ಸಹ ನೀಡುತ್ತಿಲ್ಲ. 150 ವಾಹನಗಳಿಗ ಕೇವಲ ಇಬ್ಬರು ಹೆಚ್ಚುವರಿ ಚಾಲಕರು ಇದ್ದಾರೆ. ವಾಸ್ತವವಾಗಿ ಒಂದು ವಾಹನಕ್ಕೆ ಇಬ್ಬರು ಲೋಡರ್ ಬೇಕು. ಆದರೆ ಕೆಲವು ವಾಹನಗಳಿಗೆ ಒಬ್ಬರನ್ನೇ ನೀಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಾ ಬಿಜವಾಡ ದೂರಿದರು.

ಉಪಾಧ್ಯಕ್ಷ ಆನಂದ್ ಎಸ್ ದೊಡಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !