ಶಿಬಿರದಲ್ಲಿ 700 ಜನರಿಗೆ ಆರೋಗ್ಯ ತಪಾಸಣೆ

7

ಶಿಬಿರದಲ್ಲಿ 700 ಜನರಿಗೆ ಆರೋಗ್ಯ ತಪಾಸಣೆ

Published:
Updated:
Prajavani

ಬೆಂಗಳೂರು: ವಿದ್ಯಾರ್ಥಿ ಮಿತ್ರ ಬಳಗ, ಹಿತ ಚಿಂತನಾ ಟ್ರಸ್ಟ್‌ , ಬಿ.ಜಿ.ಎಸ್. ಶಿಕ್ಷಣ ಸಂಸ್ಥೆ ಹಾಗೂ ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಸಹಯೋಗದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ 74ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಹೆಸರಘಟ್ಟ ಸಮೀಪದ ತೋಟಗೆರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸುತ್ತಮುತ್ತಲಿನ ಹತ್ತಾರು ಊರುಗಳ ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಂಡು ಕಿವಿ, ಮೂಗು, ಕಣ್ಣು, ಮೂಳೆ, ಹಲ್ಲು, ಚರ್ಮ ಪರೀಕ್ಷಿಸಿ
ಕೊಂಡು, ಹೃದಯ ರೋಗಗಳ ತಪಾಸಣೆ ಮಾಡಿಸಿಕೊಂಡರು. ಸುಮಾರು 700 ಜನರು ಶಿಬಿರದಲ್ಲಿ ಭಾಗವಹಿಸಿದ್ದರು. ಮಧುಮೇಹ ಮತ್ತು ರಕ್ತದೊತ್ತಡ ಇರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ದಾಸನಪುರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವಿ.ಜಿ.ಜಯರಾಮಯ್ಯ,‘ಮೂರು ತಿಂಗಳಿಗೆ ಒಮ್ಮೆ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಬೇಕು. ಆಗ ಜನರ ಆರೋಗ್ಯ ಸುಧಾರಿಸುತ್ತದೆ. ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !