ಬಿಗಡಾಯಿಸಿದ ಕಸದ ಸಮಸ್ಯೆ

7

ಬಿಗಡಾಯಿಸಿದ ಕಸದ ಸಮಸ್ಯೆ

Published:
Updated:
Deccan Herald

ಬೆಂಗಳೂರು: ಹೆಸರಘಟ್ಟ ಗ್ರಾಮದ ಕಸ ವಿಲೇವಾರಿಗೆ ಜಾಗ ಮಂಜೂರು ಮಾಡದ ಕಾರಣ ಕಸದ ಸಮಸ್ಯೆಯು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ.

ಕಸ ವಿಲೇವಾರಿ ಮಾಡಲು ದಾಸೇನಹಳ್ಳಿ ಗ್ರಾಮದ ಸರ್ವೆ ನಂ.14 ಮತ್ತು 15ನ್ನು ಮಂಜೂರು ಮಾಡಿಕೊಡುವಂತೆ 2014ರಲ್ಲಿ ಗ್ರಾಮ ಪಂಚಾಯಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿತ್ತು.

ಕಸದ ಸಮಸ್ಯೆಯನ್ನು ನಿರ್ಲಕ್ಷಿಸಿರುವ ಅಧಿಕಾರಿಗಳು ಸರ್ವೆ ನಂ.15ನ್ನು ಒಂದು ತಿಂಗಳ ಹಿಂದೆ ರಾಜೀವ್ ಗಾಂಧಿ ವಸತಿ ಯೋಜನೆಗೆ ಐದು ಎಕರೆ, 24 ಕುಂಟೆ ಮಂಜೂರು ಮಾಡಿ ಕೊಟ್ಟಿದೆ.

ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ, ‘ಸರ್ವೆ ನಂ.14ರ ಮೇಲೆ ಕೋರ್ಟ್‍ನಲ್ಲಿ ಸ್ಥಳೀಯರು ದಾವೆ ಹೂಡಿದ್ದಾರೆ. ಕಸ ವಿಲೇವಾರಿ ಮಾಡಲು ಜಾಗ ಎಲ್ಲಿದೆ ತೋರಿಸಿ ಎನ್ನುವ ಜಾಣ ಉತ್ತರವನ್ನು ನೀಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.

ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ ’ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಲಭ್ಯವಿರುವ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡುವಂತೆ ಅಧಿಕಾರಿಗಳಿಗೆ ಹೇಳಿದರೆ ಅವರು ಕಿವುಡತನ ತೋರಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದರು.

‘ರಸ್ತೆಯ ಪಕ್ಕದಲ್ಲಿ ಕಸ ಹೆಚ್ಚಿದೆ. ಕೊಳೆತ ವಾಸನೆ ಸಹಿಸಲು ಆಗುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.

ಯಲಹಂಕ ಉತ್ತರ ವಲಯದ ತಹಶೀಲ್ದಾರ ಮಂಜುನಾಥ್, ’ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !