ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬನಶಂಕರಿಯ ರಸ್ತೆಗೆ ಹಿರಣ್ಣಯ್ಯ ಹೆಸರು’

‘ಶ್ರದ್ಧಾಂಜಲಿ ಸಭೆ’ಯಲ್ಲಿ ಶಾಸಕ ಆರ್‌.ಅಶೋಕ ಭರವಸೆ
Last Updated 18 ಮೇ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಬನಶಂಕರಿಯ ಎರಡನೇ ಹಂತದ 24ನೇ ಅಡ್ಡರಸ್ತೆಗೆ ರಂಗಕರ್ಮಿ ದಿವಂಗತ ಮಾಸ್ಟರ್ ಹಿರಣ್ಣಯ್ಯ ಅವರ ಹೆಸರನ್ನು ಇಡಲಾಗುವುದು’ ಎಂದು ಶಾಸಕ ಆರ್.ಅಶೋಕ ಹೇಳಿದರು.

ನಗರದಲ್ಲಿ ಹಿರಣ್ಣಯ್ಯ ಅಭಿಮಾನಿಗಳು ಶನಿವಾರ ಆಯೋಜಿಸಿದ್ದ ‘ಶ್ರದ್ಧಾಂಜಲಿ ಸಭೆ’ಯಲ್ಲಿ ಅವರು ಮಾತನಾಡಿದರು.

ಸಾಹಿತಿ ಅ.ರಾ.ಮಿತ್ರ, ‘ಕನ್ನಡ ರಂಗಭೂಮಿಗೆ ಮಾಸ್ಟರ್ ಹಿರಣ್ಣಯ್ಯ ಅವರಕೊಡುಗೆ ಅಪಾರ. ಅವರು ಅನನ್ಯ ವ್ಯಕ್ತಿಯಷ್ಟೇ ಆಗಿರಲಿಲ್ಲ, ವಿಶ್ವವಿದ್ಯಾಲಯವಾಗಿದ್ದರು’ ಎಂದರು. ವಾಗ್ಮಿ ವೈ.ವಿ.ಗುಂಡೂರಾವ್ ಅವರು ನುಡಿನಮನ ಸಲ್ಲಿಸಿದರು.

ಕವಿ ಎಚ್.ಎಸ್.ವೆಂಕಟೇಶಮೂರ್ತಿ, ನಿರ್ದೇಶಕ ಬಿ.ವಿ.ರಾಜಾರಾಮ್ ಮತ್ತಿತರರು ಹಿರಣ್ಣಯ್ಯ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

ಹಿರಣ್ಣಯ್ಯ ಕುಟುಂಬದ ಸದಸ್ಯರು ಪೊಲೀಸ್‌ ಕಲ್ಯಾಣ ನಿಧಿಗೆ ಲಕ್ಷ ರೂಪಾಯಿ ದೇಣಿಗೆ ನೀಡಿದರು. ‘ನಾನು ಮಾಸ್ಟರ್ ಹಿರಣ್ಣಯ್ಯ’ ನಾಟಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT