ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಸ್‌ ಎಂದೂ ಆರದ ಹಣತೆ: ವೆಂಕಟೇಶಮೂರ್ತಿ ಅಭಿಮತ

ಅಶೋಕ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ
Last Updated 7 ಫೆಬ್ರುವರಿ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಎಸ್‌ಎಸ್‌ ಎನ್ನುವ ಹೆಸರಿನಲ್ಲಿ ಮಾಂತ್ರಿಕತೆ ಇದೆ. ಅವರು ಶಿಷ್ಯವರ್ಗಕ್ಕೆ ಮತ್ತು ಓದುಗರಿಗೆ ಎಂದೂ ಆರದ ಹಣತೆಯಾಗಿದ್ದಾರೆ’ ಎಂದು ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಜಿಎಸ್‌ಎಸ್‌ ವಿಶ್ವಸ್ಥ ಮಂಡಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿಮರ್ಶಕ ಟಿ.ಪಿ.ಅಶೋಕ ಅವರಿಗೆ ‘ಜಿಎಸ್‌ಎಸ್‌ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಜಿಎಸ್‌ಎಸ್‌ ವಿಶ್ವಸ್ಥ ಮಂಡಲಿ ಕೊಡಮಾಡುವ ಪ್ರಶಸ್ತಿಗೆ ಅದರದ್ದೇ ಆದ ಗೌರವವಿದೆ.ಘನವಾದದ್ದನ್ನು ಸರಳವಾಗಿ ಹೇಳುವ ಮೂಲಕ ಸಾರಸ್ವತ ವಲಯದಲ್ಲಿ ಮುಖ್ಯವೆನಿಸಿದ ಅಶೋಕ ಅವರಿಗೆ ಪ್ರಶಸ್ತಿ ಸಂದಿರುವುದು ನಿಜಕ್ಕೂ ಅಭಿನಂದನಾರ್ಹ’ ಎಂದು ಹೇಳಿದರು.

‘ಅಶೋಕ ಮತ್ತು ನನ್ನ ಸ್ನೇಹ ಇಂದು ನಿನ್ನೆಯದಲ್ಲ. ನಾವು ಸಾಹಿತ್ಯ ಕೂಟವನ್ನು ರಚಿಸಿಕೊಂಡಿದ್ದೆವು. ಆಗಅವರು ತಮ್ಮ ಕೈಬರಹದ ಪ್ರತಿಗಳನ್ನು ನನ್ನೊಂದಿಗೆ ಓದಿಸುತ್ತಿದ್ದರು. ಒಂದು ಚಿಕ್ಕಪುಸ್ತಕದಿಂದ ಶುರುವಾದ ಅವರ ಸಾಹಿತ್ಯ ಕೃಷಿ, ಇಂದು ಇಡೀ ಸಾರಸ್ವತ ಲೋಕವನ್ನು ಆವರಿಸಿದೆ. ಸಂಬಂಧ, ಭಾವ ಮತ್ತು ಸದ್ಭಾವನಕ್ಕೆ ಮಹತ್ವ ಕೊಡುವ ಈ ಕಾಲದ ಪ್ರಮುಖ ವಿಮರ್ಶಕ ಅವರು’ ಎಂದು ಅವರು ಪ್ರಶಂಸಿದರು.

ವಿಮರ್ಶಕ ಸಿ.ಎನ್‌.ರಾಮಚಂದ್ರನ್‌, ‘ಜಿಎಸ್‌ಎಸ್‌ ಅಸಾಧಾರಣ ಕವಿ ಮತ್ತುವಿಮರ್ಶಕರಾಗಿದ್ದರು. ಅವರ ಪ್ರತಿ ಲೇಖನವೂ ಒಂದುಹೊಸ ಒಳನೋಟವನ್ನು ಕೊಡುತ್ತದೆ. ಕಾವ್ಯಾರ್ಥ ಚಿಂತನ ಕೃತಿಯಲ್ಲಿ ಅವರು ಕನ್ನಡದಲ್ಲಿ ವಿಮರ್ಶೆ ಏಕೆ ಬೆಳೆಯಲಿಲ್ಲ ಎನ್ನುವುದರ ಕುರಿತು ಮಾತನಾಡುತ್ತಾರೆ. ಆ ವಿಷಯದ ಮೇಲಿನಅವರ ವಿಶ್ಲೇಷಣೆ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ’ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರಾದ ಅಶೋಕ, ‘ವಿಮರ್ಶೆ ಎಂದರೆ ಲೇಖಕ ಏನು ಬರೆದಿಲ್ಲ ಎಂಬುದನ್ನು ಹೇಳುವುದಲ್ಲ. ಆತ ಏನು ಬರೆದಿರುವನೋ ಅದರ ಕುರಿತು ತನಗಾದ ಅನುಭವವನ್ನು ಕಟ್ಟಿಕೊಡುವುದೇ ವಿಮರ್ಶಕನ ಕೆಲಸ’ ಎಂದು ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT