ನಕಲಿ ಟ್ವಿಟರ್ ಖಾತೆ; ಜಗ್ಗೇಶ್‌ರಿಂದ ದೂರು

ಸೋಮವಾರ, ಮಾರ್ಚ್ 25, 2019
33 °C
ಘನತೆಗೆ ಧಕ್ಕೆ ತಂದಿರುವ ಕಿಡಿಗೇಡಿಗಳು

ನಕಲಿ ಟ್ವಿಟರ್ ಖಾತೆ; ಜಗ್ಗೇಶ್‌ರಿಂದ ದೂರು

Published:
Updated:
Prajavani

ಬೆಂಗಳೂರು: ‘ನನ್ನ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದಿದ್ದ ಕಿಡಿಗೇಡಿಗಳು, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ನಟ ಜಗ್ಗೇಶ್ ಅವರು ಮಲ್ಲೇಶ್ವರ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.

‘ನಟ ಹಾಗೂ ಮಾಜಿ ಶಾಸಕನಾಗಿರುವ ನಾನು, @jaghesh2 ಎಂಬ ಯೂಸರ್‌ ನೇಮ್‌ನಲ್ಲಿ ಟ್ವಿಟರ್ ಖಾತೆ ಹೊಂದಿದ್ದೇನೆ. 5 ಲಕ್ಷ ಜನ ಹಿಂಬಾಲಕರಿದ್ದಾರೆ. ನನ್ನ ಖಾತೆಯ ಚಿತ್ರಗಳನ್ನೇ ನಕಲು ಮಾಡಿ ಬೇರೊಂದು ಖಾತೆ ತೆರೆದಿದ್ದ ಕಿಡಿಗೇಡಿಗಳು, ಗೊಂದಲಕಾರಿ ಟ್ವೀಟ್‌ ಪ್ರಕಟಿಸಿದ್ದಾರೆ. ಆ ಮೂಲಕ ನನ್ನ ಬಗ್ಗೆ ಜನರಲ್ಲಿ ಅಪನಂಬಿಕೆ ಬರುವಂತೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಜಗ್ಗೇಶ್ ತಿಳಿಸಿದ್ದಾರೆ.

‘ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ನಕಲಿ ಖಾತೆಯ ಟ್ವೀಟ್‌: ‘ರಫೇಲ್ ಹಗರಣದ ದಾಖಲೆಗಳು ಕಳ್ಳತನವಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಮೈತ್ರಿ ಸರ್ಕಾರಕ್ಕೆ ಒಂದು ದಾಖಲೆಯನ್ನು ರಕ್ಷಿಸಲು ಸಾಧ್ಯವಿಲ್ಲದಿದ್ದರೆ ಜನರ ರಕ್ಷಣೆ ಹೇಗೆ ಮಾಡ್ತಾರೆ?’ ಎಂಬ ಟ್ವೀಟ್‌ ಹರಿದಾಡಿತ್ತು. ಜಗ್ಗೇಶ್‌ ಅವರೇ ಈ ಟ್ವೀಟ್‌ ಮಾಡಿದ್ದಾರೆ ಎಂದು ಜನರು, ಅದನ್ನು ಶೇರ್ ಮಾಡಿ ಪ್ರತಿಕ್ರಿಯಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !