ಜೈನ್‌ ವಿ.ವಿ ಆ್ಯಪ್‌ನಲ್ಲಿ ಕೋರ್ಸ್‌ ಕಲಿಕೆ

6

ಜೈನ್‌ ವಿ.ವಿ ಆ್ಯಪ್‌ನಲ್ಲಿ ಕೋರ್ಸ್‌ ಕಲಿಕೆ

Published:
Updated:

ಬೆಂಗಳೂರು: ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಜೈನ್‌ ವಿಶ್ವವಿದ್ಯಾಲಯವು ಸ್ಕೂಲ್‌ ಗುರು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಇದರಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್‌ಗಳ ವಿದ್ಯಾರ್ಥಿಗಳು ಸ್ಕೂಲ್‌ ಗುರು ಜಾಲತಾಣದಲ್ಲಿನ ಪಠ್ಯ, ವಿಡಿಯೊ ಉಪನ್ಯಾಸಗಳು, ಆಡಿಯೊ ಬುಕ್‌ಗಳು, ಅನಿಮೇಟೆಡ್‌ ಮುದ್ರಿಕೆಗಳನ್ನು ಕಲಿಕೆಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಕಲಿಕಾ ಅವಕಾಶಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಯೂಸರ್‌ ಐ.ಡಿ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ.

ಸ್ಕೂಲ್‌ ಗುರು ಆನ್‌ಲೈನ್‌ ಕಲಿಕೆಗೆ ಆ್ಯಪ್‌ ಕೂಡ ರೂಪಿಸಿದ್ದು, ವಿದ್ಯಾರ್ಥಿಗಳು ಅದನ್ನು ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ನೇರಪ್ರಸಾರದ ಉಪನ್ಯಾಸಗಳನ್ನು ಆಲಿಸಬಹುದಾಗಿದೆ.

ಮಾಹಿತಿಗೆ: http://www.schoolguru.in/

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !