ಸಿಂಗಪುರದ ವಿವಿ– ಆಚಾರ್ಯ ಸಂಸ್ಥೆ ಒಪ್ಪಂದ

ಸೋಮವಾರ, ಮೇ 27, 2019
28 °C

ಸಿಂಗಪುರದ ವಿವಿ– ಆಚಾರ್ಯ ಸಂಸ್ಥೆ ಒಪ್ಪಂದ

Published:
Updated:
Prajavani

ಬೆಂಗಳೂರು: ನಗರದ ಆಚಾರ್ಯ ಶಿಕ್ಷಣ ಸಂಸ್ಥೆಯು ಸಿಂಗಪುರದ ಜೇಮ್ಸ್‌ ಕುಕ್‌ ವಿಶ್ವವಿದ್ಯಾಲಯದ ಜೊತೆಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಎರಡೂ ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಮಾಡಿದರು.

ಬಳಿಕ ಮಾತನಾಡಿದ ಆಚಾರ್ಯ ಶಿಕ್ಷಣ ಸಂಸ್ಥೆಯ ಅಂತರರಾಷ್ಟ್ರೀಯ ಸಹಯೋಗದ ಉಪನಿರ್ದೇಶಕ ಇಕ್ಬಾಲ್‌ ಅಹ್ಮದ್‌,‘ ಶಿಕ್ಷಣವನ್ನು ಜಾಗತೀಕರಣಕ್ಕೆ ಒಳಪಡಿಸುವುದು ಒಪ್ಪಂದದ ಮುಖ್ಯ ಉದ್ದೇಶ’ ಎಂದರು.

‘ಒಪ್ಪಂದದ ಅನ್ವಯ ಎರಡೂ ವಿಶ್ವವಿದ್ಯಾಲಯಗಳ ಅಂತರಶಿಕ್ಷಣ ಹಾಗೂ ಪರಿಣಿತರ ಸೇವೆಯನ್ನು ವಿನಿಮಯ ಮಾಡಿಕೊಳ್ಳಲಾಗುವುದು. ಇಲ್ಲಿನ ಉಪನ್ಯಾಸಕರು ಸಿಂಗಪುರಕ್ಕೆ ತೆರಳಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ತರಬೇತಿ ಪಡೆಯಲಿದ್ದಾರೆ. ಜೇಮ್ಸ್‌ ವಿವಿ ಪ್ರಾಧ್ಯಾಪಕರು ಆಚಾರ್ಯ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !