ಕನ್ನಡಿಗರ ನಿಂದನೆ; ಗುಜರಾತಿ ಮಹಿಳೆಗೆ ತರಾಟೆ

7

ಕನ್ನಡಿಗರ ನಿಂದನೆ; ಗುಜರಾತಿ ಮಹಿಳೆಗೆ ತರಾಟೆ

Published:
Updated:

ಬೆಂಗಳೂರು: ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಗುಜರಾತಿ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಶೆಟ್ಟಿಹಳ್ಳಿಯಲ್ಲಿ ಗುರುವಾರ ನಡೆದಿದೆ.

ಸ್ಥಳೀಯ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಿರುವ ಮಹಿಳೆ, ಮಗನ ಆಧಾರ್‌ ನೋಂದಣಿ ಮಾಡಿಸಲೆಂದು ಶೆಟ್ಟಿಹಳ್ಳಿಯ ಖಾಸಗಿ ಬ್ಯಾಂಕ್‌ಗೆ ಹೋಗಿದ್ದರು. ಸಿಬ್ಬಂದಿ, ಕೆಲವು ದಾಖಲೆ ಕೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಮಹಿಳೆ, ಕರ್ನಾಟಕ ಹಾಗೂ ಕನ್ನಡಿಗರನ್ನು ನಿಂದಿಸಲಾರಂಭಿಸಿದ್ದರು. ಅದನ್ನು ಕೇಳಿಸಿಕೊಂಡವರು, ಆ ರೀತಿ ಮಾತನಾಡದಂತೆ ಹೇಳಿದ್ದರು.

ಸ್ಥಳಕ್ಕೆ ಹೋಗಿದ್ದ ಸ್ಥಳೀಯ ಯುವಕರ ಗುಂಪು, ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅದೇ ವೇಳೆ ತಳ್ಳಾಟವೂ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕ್ಷಮೆಯಾಚಿಸಿದ ಮಹಿಳೆ ಸ್ಥಳದಿಂದ ಹೊರಟು ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ಘಟನೆ ನಡೆದಿದ್ದು ಗಮನಕ್ಕೆ ಬಂದಿದೆ. ಯಾರೊಬ್ಬರೂ ದೂರು ನೀಡಿಲ್ಲ’ ಎಂದು ಸೋಲದೇವನಹಳ್ಳಿ ಪೊಲೀಸರು ತಿಳಿಸಿದರು.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !