ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ವ ಡಯಾಗ್ನೋಸ್ಟಿಕ್ ಕೇಂದ್ರ ಉದ್ಘಾಟನೆ

Last Updated 22 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ವ ಸಂಸ್ಥೆಯು ನೂತನವಾಗಿ ನಿರ್ಮಿಸಿದ ‘ರೋಗ ಪತ್ತೆ ಕೇಂದ್ರವನ್ನು (ಡಯಾಗ್ನೋಸ್ಟಿಕ್ ಸೆಂಟರ್‌)’ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಉದ್ಘಾಟನೆ ಮಾಡಿದರು.

ಈ ಕೇಂದ್ರದಲ್ಲಿ ಉನ್ನತೀಕರಿಸಿದ ತಂತ್ರಜ್ಞಾನ ಅಳವಡಿಸಲಾಗಿದೆ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವ 128 ಸ್ಲೈಸ್ ಸಿ.ಟಿ.ಸ್ಕ್ಯಾನರ್, ರೇಡಿಯಾಲಜಿಗೆ ಸಂಬಂಧಿಸಿದ 3 ಟೆಸ್ಲಾ ಎಂ.ಆರ್‌.ಐ, ಪಿಇಟಿ ಸ್ಕ್ಯಾನರ್, ಗಾಮಾ ಕ್ಯಾಮೆರಾ, ಲಿಥೋಟ್ರಸ್ಪಿ, ದಂತ ಚಿಕಿತ್ಸೆಗೆ ಸಿಬಿಸಿಟಿ ಸೇರಿದಂತೆ ಎಲ್ಲ ರೋಗ ಪತ್ತೆ ಸೌಲಭ್ಯಗಳು ಇಲ್ಲಿವೆ.

ನಾಗರಬಾವಿಯ 11ನೇ ಬ್ಲಾಕ್‌, 2ನೇ ಹಂತದಲ್ಲಿ ಈ ಕೇಂದ್ರವಿದೆ. ರಾಜಾಜಿನಗರ ರಾಮಮಂದಿರ ರಸ್ತೆಯಲ್ಲಿರುವ ಡಯಾಗ್ನೋಸ್ಟಿಕ್ ಕೇಂದ್ರವನ್ನು 1996ರಲ್ಲಿಯೇ ಸ್ಥಾಪಿಲಾಗಿತ್ತು. ಅಂದು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಉದ್ಘಾಟಿಸಿದ್ದರು.

ಆಧುನಿಕ ತಂತ್ರಜ್ಞಾನದ ಚಿಕಿತ್ಸಾ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗುವ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದು ಕಣ್ವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ಎಂ.ವೆಂಕಟಪ್ಪ ತಿಳಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕ ಮುನಿರತ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT