ಕೆ.ಸಿ ವ್ಯಾಲಿ ಯೋಜನೆ: ಹದಗೆಟ್ಟ ರಸ್ತೆಗಳು

7

ಕೆ.ಸಿ ವ್ಯಾಲಿ ಯೋಜನೆ: ಹದಗೆಟ್ಟ ರಸ್ತೆಗಳು

Published:
Updated:
Deccan Herald

ಹೊಸಕೋಟೆ: ಬೆಂಗಳೂರಿನಿಂದ ಕೋಲಾರಕ್ಕೆ ಕೊಳವೆ ಮೂಲಕ ನೀರು ಸರಬರಾಜು ಮಾಡುವ ಕೆ.ಸಿ.ವ್ಯಾಲಿ ಯೋಜನೆ ಪಟ್ಟಣದ ನಾಗರಿಕರಿಗೆ ಶಾಪವಾಗಿ ಪರಿಣಮಿಸಿದೆ. ಪೈಪ್ ಅಳವಡಿಕೆ ಕಾಮಗಾರಿ ಮುಗಿದು ಆರು ತಿಂಗಳಾಗಿದ್ದರೂ ಅಗೆದಿರುವ ರಸ್ತೆಗೆ ಡಾಂಬರೀಕರಣ ಮಾಡದೆ ಇರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.

ಇಲ್ಲಿನ ಕೆಇಬಿ ವೃತ್ತದಿಂದ ತಿರುಮಲಶೆಟ್ಟಿಹಳ್ಳಿಯವರೆಗಿನ ಹೆದ್ದಾರಿ 207ರಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಅಲ್ಲದೆ ರಸ್ತೆ ಸಂಪೂರ್ಣ ಹದಗೆಟ್ಟ ಸ್ಥಿತಿಗೆ ತಲುಪಿದೆ. ಅಪಘಾತಗಳು ಕೂಡ ಹೆಚ್ಚುತ್ತಿವೆ.

‘ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಕೆಇಬಿ ವೃತ್ತದ ಬಳಿ ಸಣ್ಣ ಮಳೆಗೂ ಎರಡು ಅಡಿಗಳಷ್ಟು ನೀರು ನಿಲ್ಲುತ್ತಿದೆ. ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತೆ ಆಗಿದೆ. ನೀರು ತುಂಬಿಕೊಂಡಿರುವುದರಿಂದ ಹೊಂಡಗಳು ಕಾಣುತ್ತಿಲ್ಲ. ಬಹಳಷ್ಟು ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ’ ಎನ್ನುವುದು ಸ್ಥಳೀಯ ಅಂಗಡಿಯೊಂದರ ಮಾಲೀಕ ರಾಜಣ್ಣ ಅವರ
ಮಾತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !