ಸೋಮವಾರ, ಆಗಸ್ಟ್ 19, 2019
28 °C

ಮಹೇಶ್‌ ಜೋಷಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಪದಕ

Published:
Updated:
Prajavani

ಬೆಂಗಳೂರು: ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಹಾಗೂ ಕರ್ನಾಟಕ ಪೌರ ರಕ್ಷಣಾ ದಳದ ಆಫೀಸರ್ ಕಮಾಂಡಿಂಗ್ ಮಹೇಶ ಜೋಷಿ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಪದಕಕ್ಕೆ ಭಾಜನರಾಗಿದ್ದಾರೆ.  ಕರ್ನಾಟಕ ಪೌರ ರಕ್ಷಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜೋಷಿ ಅವರನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ, ಗೃಹ ಸಚಿವಾಲಯದ ‘ಪೊಲೀಸ್ ಮಹಾನಿರ್ದೇಶಕ, ಗೃಹ ರಕ್ಷಣಾ ದಳ ಹಾಗೂ ಪೌರ ರಕ್ಷಣಾ ದಳದ ಶ್ಲಾಘನೀಯ ಪದಕ’ ಪಡೆದಿದ್ದರು.

 

Post Comments (+)