ಕಲ್ಲು ಬಿದ್ದು ವಿದ್ಯಾರ್ಥಿನಿಗೆ ಗಾಯ

7

ಕಲ್ಲು ಬಿದ್ದು ವಿದ್ಯಾರ್ಥಿನಿಗೆ ಗಾಯ

Published:
Updated:
Deccan Herald

ಭಾರತೀನಗರ (ಮಂಡ್ಯ): ಸಮೀಪದ ಮಾದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿ ಕಾಲಿನ ಮೇಲೆ ತೂಕದ ಕಲ್ಲು ಬಿದ್ದು ಬೆರಳು ಮೂಳೆ ಮುರಿದಿದೆ.

ಗ್ರಾಮದ ತಮಿಳರ ಕಾಲೊನಿಯ ಭಾಗ್ಯಾ ಶಶಿಕುಮಾರ್ ಅವರ ಪುತ್ರಿ, 7 ನೇ ತರಗತಿ ವಿದ್ಯಾರ್ಥಿನಿ ಸಂಜನಾ ಗಾಯಗೊಂಡಿದ್ದಾಳೆ. ಸಂಜನಾ ಶಾಲೆಯಲ್ಲಿ ಬುಧವಾರ ಕೊಠಡಿಯ ಕಸ ಗುಡಿಸುತ್ತಿದ್ದಳು. ಆಗ ಅಕ್ಕಿ ತೂಕ ಮಾಡಲು ಟೇಬಲ್‌ ಮೇಲಿಟ್ಟಿದ್ದ 5 ಕೆ.ಜಿ ತೂಕದ ಕಲ್ಲು ಬಲಗಾಲ ಮೇಲೆ ಬಿದ್ದಿದೆ.

‘ಶಿಕ್ಷಕರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೂ ತೋರಿಸಿಲ್ಲ. ಪೋಷಕರಿಗೂ ವಿಷಯ ತಿಳಿಸಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !