ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

51 ಜೋಡಿ ಮದುವೆ: ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ ವಧು ವರರು

'ಸಾಮೂಹಿಕ ವಿವಾಹದಿಂದ ಬಡವರು ನಿರಾಳ'
Last Updated 29 ಏಪ್ರಿಲ್ 2019, 13:26 IST
ಅಕ್ಷರ ಗಾತ್ರ

ಕೊಪ್ಪಳ:ಇಂದಿನ ಆಧುನಿಕ ಯುಗದಲ್ಲಿ ಮದುವೆಗಳಿಗೆ ಖರ್ಚು ಮಾಡಿ ಪಾಲಕರು ಮತ್ತು ದಂಪತಿ ಸಾಲದ ಕೂಪದಲ್ಲಿ ನರಳುತ್ತಿದ್ದಾರೆ. ಆದರೆ ಸರಳ ಸಾಮೂಹಿಕ‌ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬಿದ್ದು ಬಡವರು, ದೀನ, ದಲಿತರಿಗೆ ಸ್ವಾಭಿಮಾನದ ಬದುಕು ಬಾಳಲು ಅನುಕೂಲವಾಗುತ್ತದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗುಳದಳ್ಳಿಯಲ್ಲಿ ಸಮರ್ಪಣಾ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ, ಕೊಪ್ಪಳ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಂಘ ಬಾಬಾ ಸಾಹೇಬ ಅಂಬೇಡ್ಕರ್ ರವರ 128ನೇ ಜಯಂತಿಯ ಪ್ರಯುಕ್ತ ಜರುಗಿದ ಸರಳ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು ಮಾತನಾಡಿದರು.

ಮದುವೆಯಾದ ನವ ದಂಪತಿ ನೇತ್ರದಾನಮಾಡಿದ್ದಾರೆ. ಇದು ಶ್ರೇಷ್ಠವಾದ ದಾನ. ಬದುಕಿದಾಗಲೂ ಜಗತ್ತು ನಮ್ಮ ಮೂಲಕ ಮತ್ತು ಜೀವ ಹೋದಾಗಲೂ ಇನ್ನೊಬ್ಬರ ಮೂಲಕ ಜಗತ್ತು ನೋಡುವಂತೆ ಮಾಡುತ್ತದೆ ಎಂಬ‌ ಕಾರಣಕ್ಕೆ ಕಣ್ಣುದಾನದ ಸಂಕಲ್ಪ ಮಾಡಿರುವದು ವಿಭಿನ್ನ ಸಾಮಾಜಿಕ ಕ್ರಾಂತಿಯ ಪರಿಕಲ್ಪನೆ ಎಂದು ಹೇಳಿದರು.

ಅಲ್ಲದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಯುವಕರು ಸರ್ಕಾರಿ ಸೌಲಭ್ಯಗಳ ಉಪಯೋಗ ಪಡೆದುಕೊಂಡು ಕೌಶಲ ಆಧಾರಿತ ತರಬೇತಿ ಪಡೆದು ಸ್ವಯಂ ಉದ್ಯೋಗ ಮತ್ತು ಕೈಗಾರಿಕೆಗಳ ಸ್ಥಾಪನೆಯತ್ತ ಹೆಚ್ಚಿನ ಗಮನ ಕೊಡಬೇಕು. ವಿದ್ಯಾರ್ಥಿಗಳಾದವರು ಶ್ರದ್ದೆಯಿಂದ ಅಧ್ಯಯನ ಮಾಡಿ‌ ಉನ್ನತ ಸ್ಥಾನಕ್ಕೇರಿದಾಗ ಮಾತ್ರ ನಿಮ್ಮ ಪಾಲಕರು ಪಟ್ಟಿರುವ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ ಎಂದರು.

ಸಂಸದಕರಡಿ‌ ಸಂಗಣ್ಣ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರರವರ ಕನಸಿನಂತೆ ಶಿಕ್ಷಣ, ಸಂಘಟನೆ, ಹೋರಾಟದಮೂಲಕ ಬದುಕು ಕಟ್ಟಿಕೊಳ್ಳಬೇಕು. ಮಾದಿಗ ಸಮಾಜದ ಯುವಕರ 51 ಜೋಡಿಗಳ‌ ವಿವಾಹವನ್ನು‌ ಇಷ್ಟು ವಿನೂತನವಾಗಿ ನೇತ್ರದಾನ ಮತ್ತು ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು‌ ವಿತರಿಸಿರುವ ಸಂಘಟಕರ ಸಾಮಾಜಿಕ‌ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇದು‌‌‌ ನಮ್ಮ ಭಾಗದಲ್ಲಿಯೇ‌‌ ಒಂದು ಕ್ರಾಂತಿಕಾರಿ ಹೆಜ್ಜೆ ಮತ್ತು‌ ಅನುಕರಣೀಯವಾಗಿದೆ ಎಂದು ಹೇಳಿದರು.

ಕನಕಗಿರಿ‌ ಶಾಸಕರಾದ ಬಸವರಾಜ ದಡೇಗಸೂರ ಮಾತನಾಡಿ, ನಮ್ಮಲ್ಲಿ ಮದುವೆಗಾಗಿ ಸಾಲ ಮಾಡಿಕೊಂಡು ಜೀತಕ್ಕಿದ್ದ ಹಲವಾರು‌ ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿ‌ ಉಚಿತ ಮದುವೆ ಮತ್ತು ವಿವಾಹದ ದಂಪತಿಗೆ‌ ಸಮಾಜ ಕಲ್ಯಾಣ ಇಲಾಖೆಯಿಂದ 50ಸಾವಿರ ಸಹಾಯಧನ ಕೊಡಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗೂಳಪ್ಪ ಹಲಗೇರಿ ಮಾತನಾಡಿ, ಸಾಮೂಹಿಕ ವಿವಾಹ ಪರಿಕಲ್ಪನೆ ಹೆಚ್ಚುತ್ತಿರುವುದರಿಂದ ಬಡವರು ನಿರಾಳರಾಗಿದ್ದಾರೆ.ಬಡವರಿಗೆ ವಿವಾಹ ಎಂಬುವುದೇ ದುಬಾರಿ ವೆಚ್ಚದ ಕಾರ್ಯ. ಅನೇಕ ಕುಟುಂಬಗಳು ಮದುವೆಗೆ ಮಾಡಿದ ಸಾಲ ತೀರಿಸಲು ಪರದಾಡುತ್ತಾರೆ. ಅವರ ಭಾರವನ್ನು ಕಡಿಮೆ ಮಾಡುವ ಇಂತಹ ಸಾಮೂಹಿಕ ವಿವಾಹಗಳು ನೆರವಾಗಿವೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್, ಸಂಸ್ಥೆಯ ಗೌರವಾಧ್ಯಕ್ಷ ವೆಂಕಟೇಶ ಬಾರಕೇರ, ಹಿರಿಯ ಮುಖಂಡರಾದ ಅಪ್ಪಣ್ಣ ಪದಕಿ, ಸದಾಶಿವಯ್ಯ ಹೀರೆಮಠ, ಈಶಪ್ಪ ಮಾದಿನೂರ, ಗುಡದಪ್ಪ ದೊಡ್ಮನಿ, ಯಮನೂರಪ್ಪ ಕುಕನೂರ, ಪಂಪಣ್ಣ ಮೇಟಿ, ಅಂದಿಗಾಲಪ್ಪ ಹೊಳೆಯಾಚಿ, ಅಮರಪ್ಪ ಯಡ್ಡೋಣಿ, ಶಂಕರ ಕೊಪ್ಪಳ, ಗಾಳೆಪ್ಪ ಗೊರವರ, ಶಂಭುಲಿಂಗಪ್ಪ ಅಂಗಡಿ, ಶಿವಪ್ಪ ಹೋಬಳಿ,ರಮೇಶ ಮೇಟಿ, ಬಸವರಾಜ ಬನ್ನಿಕೊಪ್ಪ,ರಾಘವೆರಂದ್ರ ನರಗುಂದ, ಶರಣಯ್ಯ,ಯಮನೂರಪ್ಪ ಗೊರವರ್,ಲಕ್ಷ್ಮಣ ಮುತಾಂದವರು ಭಾಗವಹಿಸಿದ್ದರು. ಕಾರ್ಯಕ್ರಮದ ಸಾಮೂಹಿಕ ವಿವಾಹಗಳ ಆಯೋಜಕರಾದ ಹಾಲೇಶ ಕಂದಾರಿ ಪ್ರಾಸ್ಥಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT