ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಡಾಟಾ ವಿಜ್ಞಾನಿಗಳಿಗೆ (ಡಾಟಾ ಸೈಂಟಿಸ್ಟ್) ಬೇಡಿಕೆ ಹೆಚ್ಚುತ್ತಿರುವುದನ್ನು ಮನಗಂಡಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿ (ಎನ್‌ಇಎಸ್), 2019–20ನೇ ಸಾಲಿನಿಂದ ದತ್ತಾಂಶವಿಜ್ಞಾನದಲ್ಲಿ ಬಿಎಸ್ಸಿ ಪದವಿ ಆರಂಭಿಸಲಿದೆ.
ಕಾಲೇಜು ಆಡಳಿತ ಈಗಾಗಲೇ ಪಠ್ಯಕ್ರಮವನ್ನು ಅಂತಿಮಗೊಳಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಅನುಮತಿ
ಯನ್ನೂ ಪಡೆದಿದೆ. ಜಯನಗರದ ನ್ಯಾಷನಲ್ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರಯೋಗಾಲಯ ಸಜ್ಜಾಗಿದೆ.
‘ಮುಂದಿನ ಹತ್ತು ವರ್ಷಗಳಲ್ಲಿ ದತ್ತಾಂಶಕ್ಕೆ ಭಾರಿ ಬೇಡಿಕೆ ಕಂಡುಬರಲಿದೆ. ದತ್ತಾಂಶ ಸಂಗ್ರಹದ ಕೊರತೆಯಿಂದಾಗಿ ಕೆಲವೊಂದು ಸಂಶೋಧನೆಗಳು ಮತ್ತು ಪ್ರಯೋಗಳನ್ನು ಮುಂದಿನ ತಲೆಮಾರಿಗೆ ಸಾಗಿಸುವುದು ಸಾಧ್ಯವಾಗುತ್ತಿಲ್ಲ. ಇಂತಹ ಕೊರತೆ ನೀಗಿಸಲು ಈ ಪದವಿ ಆರಂಭಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದತ್ತಾಂಶ ವಿಜ್ಞಾನಿಗಳಿಗೆ ಬಹಳ ಬೇಡಿಕೆ ಇದೆ. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದಲೇ ಪದವಿ ತರಗತಿ ಆರಂಭಿಸಲಾಗುತ್ತಿದೆ’ ಎಂದು ಎನ್‌ಇಎಸ್ ಅಧ್ಯಕ್ಷ ಎ.ಎಚ್.ರಾಮರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
ದತ್ತಾಂಶ ವಿಜ್ಞಾನದಲ್ಲಿ ಥಿಯರಿ, ಡಾಟಾ ಸೈನ್ಸ್, ಬಯೊ ಮೆಡಿಕಲ್ ಎಲೆಕ್ಟ್ರಾನಿಕ್ಸ್ ವಿಷಯಗಳನ್ನು ವಿದ್ಯಾರ್ಥಿಗಳು ಅಭ್ಯಸಿಸಬೇಕಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.