ಮಗಳ ಮೇಲೆ ಅತ್ಯಾಚಾರ ಅಪ್ಪನಿಗೆ ಪೊಲೀಸರ ಶೋಧ

7

ಮಗಳ ಮೇಲೆ ಅತ್ಯಾಚಾರ ಅಪ್ಪನಿಗೆ ಪೊಲೀಸರ ಶೋಧ

Published:
Updated:

ಬೆಂಗಳೂರು: ‘ಮುಂದೆ ಮದುವೆ ಆಗುವ ನಿನಗೆ ಲೈಂಗಿಕ ಕ್ರಿಯೆಯ ಬಗ್ಗೆ ಗೊತ್ತಿರಬೇಕು. ಅದನ್ನು ನಾನು ಹೇಳಿಕೊಡುತ್ತೇನೆ’ ಎಂದು ಹೇಳಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಆಟೊ ಚಾಲಕನ ವಿರುದ್ಧ ನಗರದ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗೆ ಐವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಸಂತ್ರಸ್ತೆ ಎರಡನೆಯವಳು. ‘ಅಪ್ಪ ನನ್ನನ್ನು ಎರಡು ವರ್ಷಗಳಿಂದ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದಾರೆ. ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರಿಂದ ಇಷ್ಟು ದಿನ ಯಾರಿಗೂ ಹೇಳದೆ ಸುಮ್ಮನಾಗಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾಳೆ.

‘ಅಮ್ಮ ಎಂದಿನಂತೆ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಸೋದರಿಯರೂ ಶಾಲೆ–ಕಾಲೇಜುಗಳಿಗೆ ತೆರಳುತ್ತಿದ್ದರು. ಒಂದೊಂದು ದಿನ ನಾನೊಬ್ಬಳೇ ಮನೆಯಲ್ಲಿ ಇರಬೇಕಾದ ಸ್ಥಿತಿ ಬರುತ್ತಿತ್ತು. ಈ ಸಂದರ್ಭದಲ್ಲಿ ಅಪ್ಪ ನನ್ನ ಜತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ‘ನೀನು ಅಂದರೆ ಇಷ್ಟ. ನನಗೆ ನೀನು ಬೇಕು. ಮುಂದೆ ಮದುವೆ ಆಗುವ ನಿನಗೆ ನಾನು ಕೆಲವೊಂದು ಪಾಠಗಳನ್ನು ಹೇಳಿಕೊಡುತ್ತೇನೆ’ ಎಂದು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು.’

‘ಇತ್ತೀಚೆಗೆ ಅಮ್ಮ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗಲೂ ಅಪ್ಪ ದುರ್ವರ್ತನೆ ತೋರಿದ್ದರು. ಸಹಿಸಿಕೊಳ್ಳಲು ಆಗದೆ ಅಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆ. ಇದರಿಂದ ಕೆರಳಿದ ಅಪ್ಪ, ನನ್ನ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ್ದರು. ಅದೇ ಸಮಯಕ್ಕೆ ಸೋದರಿಯರು ಮನೆಗೆ ಬಂದಿದ್ದರಿಂದ ನನ್ನ ಪ್ರಾಣ ಉಳಿಯಿತು. ಅಮ್ಮ ಸಂಜೆ ಮನೆಗೆ ಬರುವಷ್ಟರಲ್ಲಿ ಅಪ್ಪ ಮನೆ ತೊರೆದಿದ್ದರು. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.

‘ಪೋಕ್ಸೊ, ಅತ್ಯಾಚಾರ (ಐಪಿಸಿ 376) ಹಾಗೂ ಬೆದರಿಕೆ (506) ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೋಪ್ಯತೆ ಕಾಪಾಡುವ ದೃಷ್ಟಿಯಿಂದ ತನಿಖೆಯನ್ನು ಬೇರೊಂದು ಠಾಣೆಗೆ ವರ್ಗಾಯಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !