ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಲಿಷ್ಠರ ಮುಂದೆ ಮುದುಡಿದ ಕಾನೂನು’

Last Updated 23 ಫೆಬ್ರುವರಿ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ರಮ ಸಕ್ರಮ ಯೋಜನೆಯಲ್ಲಿ ಪರಿಶಿಷ್ಟರಿಗೆ ಸಿಗಬೇಕಾದ ಸೌಲಭ್ಯಗಳನ್ನುರಾಜಕೀಯವಾಗಿ ಬಲಿಷ್ಠರು ಕಬಳಿಸುತ್ತಿದ್ದಾರೆ. ಬಲಹೀನರ ಪರವಿರುವ ಕಾನೂನು ಅಂಥವರ ಮುಂದೆ ಮುದುಡಿಹೋಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಬೇಸರ ವ್ಯಕ್ತಪಡಿಸಿದರು.

‘ಜೀತ ವಿಮುಕ್ತಿ ಕರ್ನಾಟಕ’ವು (ಜೀವಿಕ) ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ಬಿಟ್ಟಿ ಚಾಕರಿ ಜೀವಂತ’ ಸಮಸ್ಯೆಯ ಕುರಿತ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬಿಟ್ಟಿ ಚಾಕರಿ ಮಾಡುತ್ತಿರುವ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯಲು ಸಂಬಂಧ‍ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಅವರಿಗೆ ಸಂಪೂರ್ಣ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದು ಕಾರ್ಮಿಕರಿಗೆ ಅವರು ಧೈರ್ಯ ತುಂಬಿದರು.

‌‘ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಜಾಗೃತಿ ಮೂಡಿಸಿರುವುದು ಬಹಳ ಕಡಿಮೆ. ಆದ್ದರಿಂದ ವ್ಯವಸ್ಥಿತವಾಗಿ ದರಿದ್ರ ಪದ್ಧತಿ ಮುಂದುವರಿಯುತ್ತಿದೆ. ಗಿರಿಜನ ಉಪಜನ ಯೋಜನೆ ಅಡಿ ಬಿಡುಗಡೆಯಾಗುತ್ತಿರುವ ಅನುದಾನವನ್ನು ಅಧಿಕಾರಿಗಳು ಖರ್ಚು ಮಾಡುತ್ತಿಲ್ಲ. ಅದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಬೇಕು’ ಎಂದರು.

ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ‘ದಲಿತರು ಇರುವುದೇ ಅವರ ಕೆಲಸ ಮಾಡಲು ಎಂದು ಬಲಿಷ್ಠರು ಭಾವಿಸಿದ್ದಾರೆ. ಇಂಥ ಮನಸ್ಥಿತಿ ಬದಲಾಗಬೇಕು’ ಎಂದು ಹೇಳಿದರು.

‘ಬೆಳಗಾವಿಯ ಜಾನುಕೊಪ್ಪ ಗ್ರಾಮದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರ ಮನೆಗಳಲ್ಲಿ ಬಿಟ್ಟಿ ಚಾಕರಿ ಮಾಡುವವರು ಹೆಚ್ಚಾಗಿದ್ದಾರೆ. ಭಯದಿಂದ ಅವರು ಯಾವ ಸಭೆಗಳಲ್ಲೂ ಭಾಗವಹಿಸುವುದಿಲ್ಲ’ ಎಂದು ಬೈಲಹೊಂಗಲದ ನಾಗಪ್ಪ ಹೇಳಿದರು.

ಹಕ್ಕೊತ್ತಾಯಗಳು

* ಸ್ವ ಉದ್ಯೋಗಕ್ಕೆ ನೆರವು

* 5 ಎಕರೆ ಕೃಷಿ ಭೂಮಿ ಕೊಡಬೇಕು

* ಶಿಕ್ಷಣ, ವಸತಿ, ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT