‘ಹಿರಿಮೆ ಒಪ್ಪುವ ಮನಃಸ್ಥಿತಿ ಪ್ರಗತಿಪರರಿಗಿಲ್ಲ’

7
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಭಿಮತ

‘ಹಿರಿಮೆ ಒಪ್ಪುವ ಮನಃಸ್ಥಿತಿ ಪ್ರಗತಿಪರರಿಗಿಲ್ಲ’

Published:
Updated:
Prajavani

ಬೆಂಗಳೂರು: ‘ಭಾರತದ ಹಿರಿಮೆಯನ್ನು ಜಗತ್ತು ಕೊಂಡಾಡುತ್ತಿದೆ. ಆದರೆ, ನಮ್ಮ ದುರಂತ ನೋಡಿ, ಅದನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಪ್ರಗತಿಪರರಿಗಿಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಸಂಸ್ಕೃತ ಭಾರತೀ ಸಂಸ್ಥೆ ರಾಜರಾಜೇಶ್ವರಿ ನಗರದಲ್ಲಿ ಆಯೋಜಿಸಿರುವ ‘ಸಂಸ್ಕೃತ ಸಂಜೀವಿನಿ’ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

‘ಭಾರತ ಜಗತ್ತಿಗೆ ಕೊಟ್ಟ ಅಮೂಲ್ಯ ಕೊಡುಗೆ ಸಂಸ್ಕೃತ. ಗಡಿ ದಾಟಿ ಹೋದರೆ ಅದರ ವ್ಯಾಪ್ತಿ ಗೊತ್ತಾಗುತ್ತದೆ. ಆದರೆ ನಮ್ಮ ನಿತ್ಯ ಜೀವನದಲ್ಲಿ ಸಂಸ್ಕೃತಕ್ಕೆ ಕಡಿಮೆ ಅವಕಾಶ ಕೊಡುವ ಮೂಲಕ ಪರಕೀಯ ಭಾಷೆಯ ಅಡಿದಾವರೆಯಲ್ಲಿ ನೆಮ್ಮದಿಯನ್ನು ಕಾಣಲು ಹೊರಟಿದ್ದೇವೆ’ ಎಂದು ವಿಷಾದಿಸಿದರು.

‘ಪರಕೀಯರು ಸಂಸ್ಕೃತದ ಹಸ್ತಪ್ರತಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅವುಗಳಲ್ಲಿರುವ ನಿಗೂಢತೆಯನ್ನು ತಿಳಿದುಕೊಳ್ಳಲು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದಾರೆ’ ಎಂದರು.

ವಿದ್ವಾಂಸ ಹಂಪ ನಾಗರಾಜಯ್ಯ, ‘ಭಾಷೆಯನ್ನು ಹೊರತುಪಡಿಸಿ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಶಬ್ದದ ಬೆಳಕಿರದಿದ್ದರೆ ವಿಶ್ವ ಅಂಧಕಾರದಲ್ಲಿ ಮುಳುಗುತ್ತಿತ್ತು’ ಎಂದರು.

‘ಸಂಸ್ಕೃತ ಭಾಷೆ ಜ್ಞಾನದ ಜಗತ್ತಿನ ಪ್ರವೇಶಕ್ಕೆ ವೀಸಾ ಇದ್ದಂತೆ. ಕನ್ನಡದ ನಿಘಂಟಿನಲ್ಲಿ ಶೇಕಡಾ 65ರಷ್ಟು ಸಂಸ್ಕೃತ ಪದಗಳಿವೆ. ಕನ್ನಡವು ಸಂಸ್ಕೃತ-ಪ್ರಾಕೃತವೆಂಬ ಇಬ್ಬರು ತಾಯಂದಿರ ಮೊಲೆಹಾಲು ಕುಡಿದಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಜನಾರ್ದನ ಹೆಗಡೆಯವರ ‘ಸುಬಂತ-ಶೇವಧಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಅಲ್ಲದೆ ‘ಸಂಭಾಷಣ-ಸಂದೇಶ’ ಮಾಸಪತ್ರಿಕೆಯ ಅಂತರ್ಜಾಲದ ಆವೃತ್ತಿಯನ್ನು ಸಚಿವರು ಲೋಕಾರ್ಪಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !