ರಾಜ್ಯದಲ್ಲಿ 20 ದಿನಗಳಲ್ಲಿ 155 ಜನರಿಗೆ ಎಚ್‌1ಎನ್‌1

7

ರಾಜ್ಯದಲ್ಲಿ 20 ದಿನಗಳಲ್ಲಿ 155 ಜನರಿಗೆ ಎಚ್‌1ಎನ್‌1

Published:
Updated:

ಬೆಂಗಳೂರು: ರಾಜ್ಯದಲ್ಲಿ ಎಚ್‌1ಎನ್‌1 ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ 20 ದಿನಗಳಲ್ಲಿ 155 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಜನರಲ್ಲಿ ಎಚ್‌1ಎನ್‌1 ಪ್ರಕರಣಗಳು ಖಚಿತಪಟ್ಟಿವೆ.

 ಎಚ್‌1ಎನ್‌1 ತಡೆಗಟ್ಟಲು ಮತ್ತು ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸಾರ್ವಜನಿಕ
ರಿಗೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.  2018 ಸೆಪ್ಟಂಬರ್‌ ಮೊದಲ ವಾರದಿಂದ ಡಿಸೆಂಬರ್‌ ಅಂತ್ಯದವರೆಗೆ 1,733 ಪ್ರಕರಣಗಳು ವರದಿಯಾಗಿದೆ.

ಬೆಂಗಳೂರು ನಗರ 31, ಬಿಬಿಎಂಪಿ 24, ದಕ್ಷಿಣ ಕನ್ನಡ 16, ಮೈಸೂರು 14 ಮತ್ತು ಶಿವಮೊಗ್ಗದಲ್ಲಿ 10 ಜನರಲ್ಲಿ ಎಚ್‌1ಎನ್‌1 ಇರುವುದು ಖಚಿತವಾಗಿದೆ. ಉಳಿದ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿದೆ. ಒಟ್ಟು 985 ಶಂಕಿತರ ರಕ್ತ ಪರೀಕ್ಷೆ ನಡೆಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !