ಸೋಮವಾರ, ಆಗಸ್ಟ್ 19, 2019
28 °C
ಆಕೃತಿ 3ಡಿ ಸಂಸ್ಥೆಯಿಂದ ಹೊಸ ‍ಪ್ರಯತ್ನ

ವಿಜ್ಞಾನ ಕಲಿಕೆಗೆ ಪ್ರಾತ್ಯಕ್ಷಿಕೆ: ‘ಆಕೃತಿ 3ಡಿ’ ಪ್ರಯತ್ನ

Published:
Updated:

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವಿಜ್ಞಾನ –ತಂತ್ರಜ್ಞಾನದ ವಿಷಯಗಳನ್ನು ತಿಳಿಸಲು ಪ್ರಾಯೋಗಿಕ ಕಲಿಕಾ ವಿಧಾನವನ್ನು ಅಳವಡಿಸುವ ಹೊಸ ಪ್ರಯತ್ನಕ್ಕೆ ನವೋದ್ಯಮ ಸಂಸ್ಥೆಯಾದ ‘ಆಕೃತಿ 3ಡಿ’ ಮುಂದಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಆಕೃತಿ 3ಡಿ ಸಂಸ್ಥೆಯ ಸಿಇಒ ರಾಘವೇಂದ್ರ, ‘ವಿಜ್ಞಾನ, ತಂತ್ರ ಜ್ಞಾನ, ಎಂಜಿನಿಯರಿಂಗ್, ಗಣಿತ ವಿಷಯ ಗಳನ್ನು ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ‘ಡಿಸೈನ್ ಥಿಂಕಿಂಗ್’ ಎಂಬ ಹೊಸ ಪ್ರಯೋಗಾಲಯದ ಪರಿಕಲ್ಪನೆಯನ್ನು ಆವಿಷ್ಕರಿಸಿದ್ದೇವೆ. ರಾಜ್ಯದ ಎಲ್ಲಾ ಶಾಲೆಗಳಲ್ಲೂ ಇಂತಹ ಪ್ರಯೋಗಾಲಯ ಆರಂಭಿಸುವ ಗುರಿ ನಮ್ಮದು’ ಎಂದರು. 

‘ಆಧುನಿಕ ತಂತ್ರಜ್ಞಾನ, ಉಪಕರಣ ಬಳಸಿ ವಿಷಯ ಕಲಿಸುವುದಕ್ಕೆ ಇದು ನೆರವಾಗಲಿದೆ. ಉದಾಹರಣೆಗೆ ಹೃದಯದ ಕಾರ್ಯವನ್ನು ಬರೇ ಚಿತ್ರದ ಮೂಲಕ ವಿವರಿಸುವುದಕ್ಕಿಂತ ಅದರ ಮೂಲ ಮಾದರಿ ತೋರಿಸಿ ಹೇಳಿದರೆ ಮಕ್ಕಳಿಗೆ ಹೆಚ್ಚು ಮನದಟ್ಟಾಗ ಲಿದೆ. ವಿದ್ಯಾರ್ಥಿಗಳು ಕಲಿತಿದ್ದನ್ನು ಪ್ರಾಯೋಗಿಕವಾಗಿಯೂ ಮಾಡಿ ನೋಡಬಹುದು. ಇದರ ನೆರವಿನಿಂದ ರಾಕೆಟ್‌ ತಂತ್ರಜ್ಞಾನ, ಏರೋಸ್ಪೇಸ್‌
ನಂತಹ ವಿಷಯಗಳನ್ನೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ಕಲಿಸಬಹುದು’ ಎಂದು ಹೇಳಿದರು.

‘ಈ ಪರಿಕಲ್ಪನೆ ರೂಪ ತಳೆದಿದ್ದು ಸುರತ್ಕಲ್‌ನ ಎನ್ಐಟಿಕೆಯ ಇನ್ಕ್ಯು ಬೇಷನ್ ಕೇಂದ್ರದಲ್ಲಿ. ವಿದ್ಯಾರ್ಥಿ ದೆಸೆಯಲ್ಲೇ ವಿಜ್ಞಾನ ತಂತ್ರಜ್ಞಾನದ ಆಸಕ್ತಿ ಮೂಡುವಂತೆ ಮಾಡುವ ಮೂಲಕ ಭವಿಷ್ಯದ ವಿಜ್ಞಾನಿ ಹಾಗೂ ಸಂಶೋಧಕರರಿಗೆ ಭದ್ರ ತಳಹದಿ ಹಾಕಬೇಕೆಂಬುದು ನಮ್ಮ ಉದ್ದೇಶ’ ಎಂದರು. ಸಂಪರ್ಕ: 9632515705 info@aakruthi3d.com

Post Comments (+)