ಹಿರಿಯ ಪತ್ರಕರ್ತ ಬಿ.ಜಯಕುಮಾರ್ ನಿಧನ

7

ಹಿರಿಯ ಪತ್ರಕರ್ತ ಬಿ.ಜಯಕುಮಾರ್ ನಿಧನ

Published:
Updated:
Prajavani

ರಾಜರಾಜೇಶ್ವರಿ ನಗರ: ಹಿರಿಯ ಪತ್ರಕರ್ತ ಬಿ.ಜಯಕುಮಾರ್ (68) ಅವರು ಬುಧವಾರ ಬೆಳಿಗ್ಗೆ ರಾಜಾಜಿನಗರದ ಕಾಡೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೂಲತಃ ಹೊಸಕೋಟೆಯ ನಂದಗುಡಿ ಗ್ರಾಮದಲ್ಲಿ ಜನಿಸಿದ ಅವರು ನಾಗರಭಾಬಾವಿಯಲ್ಲಿ ವಾಸವಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. 

ರಂಗೋಲಿ ಸಿನಿಮಾ ಪತ್ರಿಕೆ, ಸ್ಟ್ರಾಂಗ್ ಇಂಡಿಯಾ, ರಾಜಋಷಿ ಪಾಕ್ಷಿಕ ಪತ್ರಿಕೆ ಸಂಪಾದಕರಾಗಿ, ಸ್ಟ್ರಾಂಗ್ ಇಂಡಿಯಾ ಪತ್ರಿಕೆಯಲ್ಲಿ ಸಂಪಾದಕ, ಪ್ರಕಾಶಕರಾಗಿ ದುಡಿದಿದ್ದರು. 1984ರಲ್ಲಿ ಇವರ ಸಂಘಟನೆಯ ಅಡಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಂತ್ಯಕ್ರಿಯೆ ನಗರದ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !