ಭಾನುವಾರ, ಆಗಸ್ಟ್ 25, 2019
28 °C

ಉಸಿರುಗಟ್ಟಿ ಸಾವಪ್ಪಿರುವ ಶಂನಾದ್ ಬಷೀರ್

Published:
Updated:
Prajavani

ಬೆಂಗಳೂರು/ಚಿಕ್ಕಮಗಳೂರು: ‘ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಪ್ರೊ. ಶಂನಾದ್ ಬಷೀರ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದರು.

‘ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಬಷೀರ್ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಖಚಿತವಾಗಿ ತಿಳಿಯಲಿದೆ’ ಎಂದು ಹೇಳಿದರು.

ಮೃತದೇಹವನ್ನು ಸಂಬಂಧಿಕರು ಕೇರಳದ ಕೊಲ್ಲಂಗೆ ಶುಕ್ರವಾರ ಕೊಂಡೊಯ್ದಿದ್ದಾರೆ. ಇದೇ 3ರಂದು ಬಾಬಾಬುಡನ್ ಗಿರಿಗೆ ತೆರಳಿದ್ದ ಅವರು ಕಾರಿನಲ್ಲೇ ಶವವಾಗಿ ಗುರುವಾರ ಪತ್ತೆಯಾಗಿದ್ದರು.

ಐಡಿಐಎ (ಇಂಕ್ರೀಸಿಂಗ್ ಡೈವರ್ಸಿಟಿ ಬೈ ಇನ್‌ಕ್ರೀಸಿಂಗ್ ಆಕ್ಸೆಸ್ ಟು ಲೀಗಲ್ ಎಜುಕೇಷನ್) ಟ್ರಸ್ಟ್‌ನ ಸಂಸ್ಥಾಪಕ ರಾಗಿದ್ದ ಇವರು, ಬೌದ್ಧಿಕ ಆಸ್ತಿ ಹಕ್ಕಿನ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದರು.

1976ರಲ್ಲಿ ಹುಟ್ಟಿದ್ದ ಇವರು, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಲ್ಲಿ ಕಾನೂನು ಪದವಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಮಾನವಿಕ ಸಂಶೋಧನಾ ಕ್ಷೇತ್ರ, ಕಾನೂನು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ್ದ ಕೊಡುಗೆ ಪರಿಗಣಿಸಿ ಇನ್ಫೊಸಿಸ್‌ ಪ್ರತಿಷ್ಠಾನವು 2014ರಲ್ಲಿ ಇವರಿಗೆ ಪ್ರಶಸ್ತಿ ನೀಡಿತ್ತು.

Post Comments (+)