ಸಿಬ್ಬಂದಿ ವೇತನಕ್ಕೆ ಹಣವಿಲ್ಲ; ಜಿಲ್ಲಾಧಿಕಾರಿ ಪ್ರತಿಕ್ರಿಯೆ

7
ಗೊರವನಹಳ್ಳಿ ಪಾಲಿಟೆಕ್ನಿಕ್ ಬಂದ್‌ ವಿರೋಧಿಸಿ ಎಸ್‌ಎಫ್ಐ ಪ್ರತಿಭಟನೆ

ಸಿಬ್ಬಂದಿ ವೇತನಕ್ಕೆ ಹಣವಿಲ್ಲ; ಜಿಲ್ಲಾಧಿಕಾರಿ ಪ್ರತಿಕ್ರಿಯೆ

Published:
Updated:
Deccan Herald

ತುಮಕೂರು: ಗೊರವನಹಳ್ಳಿಯ ಮಹಾಲಕ್ಷ್ಮಿ ಪಾಲಿಟೆಕ್ನಿಕ್ ಕಾಲೇಜನ್ನು ಮುಚ್ಚುವ ಹುನ್ನಾರ ಕೈ ಬಿಡಬೇಕು. ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

2009ರಲ್ಲಿ ಕೊರಟಗೆರೆ ತಾಲ್ಲೂಕಿನಲ್ಲಿ ಪ್ರಾರಂಭವಾದ ಏಕೈಕ ಪಾಲಿಟೆಕ್ನಿಕ್ ಕಾಲೇಜನ್ನು ಯಾವುದೇ ಸಮಸ್ಯೆ ಗಳಿಲ್ಲದೇ ಸುಗಮವಾಗಿ ನಡೆಯುತ್ತಿತ್ತು. ಫಲಿತಾಂಶವೂ ಉತ್ತಮವಾಗಿತ್ತು. ಆದರೆ, 2015ರ ಬಳಿಕ ಕಾಲೇಜು ಜಿಲ್ಲಾಡಳಿತದ ಆಡಳಿತಕ್ಕೆ ಒಳಪಟ್ಟಿತು. ಈಗ ಮೂಲಸೌಕರ್ಯ ನೆಪವೊಡ್ಡಿ ಜಿಲ್ಲಾಡಳಿತವೇ ಕಾಲೇಜನ್ನು ಮುಚ್ಚುವ ನಿರ್ಧಾರವನ್ನು ಮಾಡಿರುವುದು ಖಂಡನೀಯ ಎಂದು ದೂರಿದರು.

ಜಿಲ್ಲಾಧಿಕಾರಿ ಹೇಳಿಕೆ: ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲ. ಮೇಲ್ವಿಚಾರಣೆ ಮಾತ್ರ ನಮ್ಮ ಕೈಯಲ್ಲಿ ಇದ್ದು, ಸರ್ಕಾರದ ಹಂತದಲ್ಲಿ ಯಾವ ರೀತಿಯ ತೀರ್ಮಾನವಾಗುತ್ತದೆಯೊ ಅದಕ್ಕೆ ಜಿಲ್ಲಾಡಳಿತ ಬದ್ಧವಾಗಿರುತ್ತದೆ ಎಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಹೇಳಿದರು.

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ನೌಷಾದ್ ಸೆಹಗನ್, ಅವಿತಾರಾಧ್ಯ, ಮುತ್ತು, ಕಿರಣ್, ಚೇತನ್‌ಕುಮಾರ್, ಸುರೇಶ್, ಹರೀಶ್, ಶಿವಕುಮಾರ್, ಕೃಷ್ಣಮೂರ್ತಿ, ಮಂಜುನಾಥ, ಎ.ವಿ.ಲಕ್ಷ್ಮಿ, ಸತೀಶ್‌ಕುಮಾರ್, ಎಸ್.ಎಫ್‌.ಐ ಜಿಲ್ಲಾ ಘಟಕ ಅಧ್ಯಕ್ಷ ಇ.ಶಿವಣ್ಣ, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಾಘವೇಂದ್ರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !