ವಿವೇಕಾನಂದ ತತ್ವೋಪದೇಶ ಸಾರ್ವಕಾಲಿಕ: ಪ್ರೊ.ಕೆ.ಆರ್.ವೇಣುಗೋಪಾಲ್

7
ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ

ವಿವೇಕಾನಂದ ತತ್ವೋಪದೇಶ ಸಾರ್ವಕಾಲಿಕ: ಪ್ರೊ.ಕೆ.ಆರ್.ವೇಣುಗೋಪಾಲ್

Published:
Updated:

ಬೆಂಗಳೂರು: ‘19ನೇ ಶತಮಾನದಲ್ಲಿ ಹಿಂದುತ್ವ ಪುನಶ್ಚೇತನಗೊಳ್ಳಲು ಸ್ವಾಮಿ ವಿವೇಕಾನಂದರೇ ಕಾರಣ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದುತ್ವ ಧರ್ಮವಲ್ಲ, ಅದೊಂದು ಜೀವನ ಪದ್ಧತಿ  ಎಂದು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಪ್ರತಿಪಾದಿಸಿದ್ದರು. ಎಲ್ಲ ಧರ್ಮಗಳ ಸಾರವೂ ಒಂದೇ ಎಂದು ಸಾರಿದ್ದರು. ಅವರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ’ ಎಂದರು.

ವಿ.ವಿ.ಯ ಕುಲಸಚಿವ ಡಾ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಶಿವರಾಜು, ವಿಜಯ್ ಬಿದರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !