‘ಪ್ರಜಾಪ್ರತಿನಿಧಿ’ ವಾಹಿನಿ ಮುಖ್ಯಸ್ಥನ ಬಂಧನ

7

‘ಪ್ರಜಾಪ್ರತಿನಿಧಿ’ ವಾಹಿನಿ ಮುಖ್ಯಸ್ಥನ ಬಂಧನ

Published:
Updated:

ಬೆಂಗಳೂರು: ರಹಸ್ಯ ಕಾರ್ಯಾಚರಣೆಯ ಹೆಸರಿನಲ್ಲಿ ಬಟ್ಟೆ ಅಂಗಡಿಗಳ ಮಾಲೀಕರನ್ನು ಬೆದರಿಸಿ ಸುಲಿಗೆ ಮಾಡು
ತ್ತಿದ್ದ ಪ್ರಕರಣದಲ್ಲಿ ‘ಪ್ರಜಾ ಪ್ರತಿನಿಧಿ 24X7’ ಸ್ಥಳೀಯ ಸುದ್ದಿ ವಾಹಿನಿಯ ಮುಖ್ಯಸ್ಥನನ್ನೂ ಬಂಧಿಸಲಾಗಿದೆ.

ಬನಶಂಕರಿ ಪೊಲೀಸರು ಇತ್ತೀಚೆಗೆ ಆ ವಾಹಿನಿಯ ವರದಿಗಾರರು, ಕ್ಯಾಮೆರಾಮನ್ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದರು. ‘ಸಂತೋಷ್ ಕುಮಾರ್ ಅಲಿಯಾಸ್ ಸಿಂಹ ಎಂಬಾತ, ಎಂಟು ತಿಂಗಳ ಹಿಂದೆ ಈ ವಾಹಿನಿ ಪ್ರಾರಂಭಿಸಿದ್ದ. ಅದನ್ನು ರಾಜ್ಯ
ದಾದ್ಯಂತ ವಿಸ್ತರಿಸಲು ಹಣಕ್ಕಾಗಿ ಈ ದಂಧೆಗಿಳಿದಿದ್ದ. ಈಗ ಆತನನ್ನೂ ಬಂಧಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಪಾಪರೆಡ್ಡಿಪಾಳ್ಯ ನಿವಾಸಿಯಾದ ಸಂತೋಷ್, ರಾಜ್ಯ ಮಾನವ ಹಕ್ಕುಗಳು ಮತ್ತು ಪತ್ರಕರ್ತರ ಸಮಿತಿಯ ‌ಅಧ್ಯ
ಕ್ಷನೂ ಆಗಿದ್ದಾನೆ. ಮೊದಲು ‘ಪ್ರಜಾಪ್ರತಿನಿಧಿ’ ಪತ್ರಿಕೆ ನಡೆಸುತ್ತಿದ್ದ ಈತ, ಬಳಿಕ ಪತ್ನಿ ಅಶ್ವಿನಿ ಅವರ ಹೆಸರಿನಲ್ಲಿ ಸುದ್ದಿ ವಾಹಿನಿಗೆ ನೋಂದಣಿ ಮಾಡಿಸಿದ್ದ.’

‘ವಿ.ಕೆ.ಮಹದೇವ್, ಅಶೋಕ್ ಕುಮಾರ್, ನವೀನ್ ಎಂಬುವರನ್ನು ವಾಹಿನಿಗೆ ವರದಿಗಾರರನ್ನಾಗಿ ನೇಮಕ ಮಾಡಿಕೊಂಡ ಸಂತೋಷ್, ರಾಕೇಶ್ ಗೌಡ ಎಂಬಾತನನ್ನು ಮಾಹಿತಿದಾರನನ್ನಾಗಿ ಇಟ್ಟುಕೊಂಡಿದ್ದ. ಅಲ್ಲದೆ, ತನ್ನ ತಂಗಿಯ ಗಂಡನಾದ ಆನಂದ್‌ಗೆ ಕ್ಯಾಮೆರಾಮನ್ ಹುದ್ದೆ ನೀಡಿದ್ದ.’

‘ಬಟ್ಟೆ ಅಂಗಡಿಗಳಿಗೆ ನುಗ್ಗಿ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ‘ಬ್ರಾಂಡೆಡ್ ಉತ್ಪನ್ನಗಳೆಂದು ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಾರುತ್ತಿದ್ದೀರಿ. ನಿಮ್ಮ ಅವ್ಯವಹಾರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಣ ಕೊಡದಿದ್ದರೆ ಅದನ್ನು ಪ್ರಸಾರ ಮಾಡುತ್ತೇವೆ. ಸಿಸಿಬಿ ಪೊಲೀಸರಿಗೂ ವಿಡಿಯೊ ಕೊಟ್ಟು ಮಳಿಗೆ ಮೇಲೆ ದಾಳಿ ಮಾಡಿಸುತ್ತೇವೆ’ ಎಂದು ಮಾಲೀಕರನ್ನು ಬೆದರಿಸಿ ಹಣ ಕೀಳುತ್ತಿದ್ದರು. ಇತ್ತೀಚೆಗೆ ಜಯನಗರದ ‘ಸ್ಟೈಲೋ’ ಬಟ್ಟೆ ಅಂಗಡಿಯಲ್ಲಿ ಸುಲಿಗೆಗೆ ಯತ್ನಿಸಿದ್ದಾಗ ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !