ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಾಲೆಂಟೈನ್‌ ಡೇ’: ಎಚ್ಚರ ವಹಿಸಲು ಶಾಲೆಗಳಿಗೆ ಸೂಚನೆ

Last Updated 11 ಫೆಬ್ರುವರಿ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಯಾಲೆಂಟೈನ್‌ ಡೇ’ ಯಂದು ಶಾಲೆಗಳಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಖಾಸಗಿ ಶಾಲೆಗಳಿಗೆ ಸೂಚಿಸಿದೆ.

ಸಂಘಟನೆಯ ಸದಸ್ಯ ಶಾಲೆಗಳ ಶಿಕ್ಷಕರು ಮತ್ತು ಪೋಷಕರ ಸಂಘದ ಸದಸ್ಯರು ವಿದ್ಯಾರ್ಥಿಗಳ ಚೀಲಗಳನ್ನು ಪರಿಶೀಲಿಸಬೇಕು. ಶಾಲೆಯ ಒಳಗೆ ತರಲು ಅನುಮತಿ ಇಲ್ಲದ ವಸ್ತುಗಳು ಚೀಲದಲ್ಲಿ ಇದ್ದರೆ, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಶಾಲೆಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.

ಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವುದಕ್ಕೆ ಮೊದಲೇ ಪ್ರೀತಿ–ಪ್ರೇಮದ ವಿಚಾರಗಳಿಗೆ ಮರುಳಾಗುತ್ತಿದ್ದಾರೆ. ಪ್ರೀತಿ– ಪ್ರೇಮ ವಿಚಾರದಲ್ಲಿ ಚಿಕ್ಕ ವಯಸ್ಸಿನಲ್ಲೇ ಗುಂಪುಗಾರಿಕೆ, ಕೊಲೆ, ಹೊಡೆದಾಟದಂತಹ ಘಟನೆಗಳು ವರದಿಯಾಗುತ್ತಿವೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ.

ಶಾಲೆಯ ಒಳಗೆ ಮತ್ತು ಆವರಣದಲ್ಲಿ ‘ವ್ಯಾಲೆಂಟೈನ್‌ ಡೇ’ಯಂದು ಗ್ರೀಟಿಂಗ್ಸ್‌ನಂತಹ ಉಡುಗೊರೆಗಳನ್ನು ವಿನಿಮಯ ಮಾಡುವಂತಿಲ್ಲ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ತಿಳಿಸಿದ್ದಾರೆ.

ಆ ದಿನದಂದು ಮಕ್ಕಳ ಚಟುವಟಿಕೆಯ ಮೇಲೆ ಕಣ್ಣಿಡಬೇಕು. ಅವರು ಎಲ್ಲಿರುತ್ತಾರೆ, ಶಾಲೆಗೆ ಬರುತ್ತಾರೊ ಅಥವಾ ಬೇರೆಡೆಗೆ ಹೋಗಿ ಸಮಯ ಕಳೆಯುತ್ತಾರೊ ಎಂಬ ಬಗ್ಗೆ ಗಮನಹರಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ.

‘ವ್ಯಾಲೆಂಟೈನ್‌ ಡೇಗೆ ಕೆಂಪು ಬಟ್ಟೆ ತೊಡುವ ಸಾಧ್ಯತೆ ಇರುತ್ತದೆ. ಈ ಬಣ್ಣ ಪ್ರೇಮವನ್ನು ಸಂಕೇತಿಸುತ್ತದೆ. ಕೆಲವು ಮಕ್ಕಳು ಮನೆಯಿಂದ ಸಮವಸ್ತ್ರದಲ್ಲಿ ಹೊರಟು ಬೇರೆ ಕಡೆ ಬಟ್ಟೆ ಬದಲಿಸಿ, ಕೆಂಪು ಬಣ್ಣದ ಬಟ್ಟೆ ತೊಟ್ಟುಕೊಳ್ಳುತ್ತಾರೆ. ಈ ರೀತಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಪೋಷಕರು ತಿಳಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT