ನಮ್ಮ ಪರಿಸರ ಅದೆಂಥ ಸುಂದರ

7

ನಮ್ಮ ಪರಿಸರ ಅದೆಂಥ ಸುಂದರ

Published:
Updated:
Deccan Herald

ಕಗ್ಗದಾಸಪುರದ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯ ಕಸದ ವಾಹನಗಳು ಸುರಿದುಹೋಗುವ ತ್ಯಾಜ್ಯವನ್ನು ಸ್ಥಳೀಯ ನಾಗರಿಕರೇ ವಿಲೇವಾರಿ ಮಾಡಿದರು.

ಎಲ್ಲೆಲ್ಲಿಂದಲೋ ತ್ಯಾಜ್ಯಗಳನ್ನು ವಾಹನಗಳಲ್ಲಿ ತಂದು ಮುಖ್ಯರಸ್ತೆಯಲ್ಲಿಯೇ ಸುರಿದುಹೋಗುವ ಕಾರಣ ಸ್ಥಳೀಯರು ಕೆಲವು ಬಗೆಯ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ಬಗ್ಗೆ ಪಾಲಿಕೆಗೆ ಸ್ಥಳೀಯರು ದೂರನ್ನೂ ನೀಡಿದ್ದರು. ಆದರೆ ಪಾಲಿಕೆ ಸ್ಪಂದಿಸದ ಕಾರಣ ಸ್ಥಳೀಯರೇ ಒಟ್ಟಾಗಿ ಸೆಪ್ಟೆಂಬರ್‌ ಎಂಟರಂದು ತ್ಯಾಜ್ಯ ವಿಲೇವಾರಿ ಮಾಡಿ ಇಡೀ ಪ್ರದೇಶಕ್ಕೆ ಬಣ್ಣ ಬಳಿದು, ‘ತ್ಯಾಜ್ಯ ಬೇಡ’ ಎಂದು ಗೋಡೆಗಳಲ್ಲಿ ಬರೆದರು.‌

‘ಕಗ್ಗದಾಸಪುರದ ಮುಖ್ಯರಸ್ತೆಯ 300 ಮೀಟರ್‌ ವ್ಯಾಪ್ತಿಯನ್ನು ಸುತ್ತಮುತ್ತಲಿನ ಪ್ರದೇಶಗಳ ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವೆಂದು 2014ರಲ್ಲಿ ಗುರುತಿಸಿತ್ತು. 2017ರಲ್ಲಿ ಈ ಬಗ್ಗೆ ಪಾಲಿಕೆಯ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಕಳೆದ ಜುಲೈನಲ್ಲಿ ಮೇಯರ್‌ ಸಂಪತ್‌ರಾಜ್‌ ಕಗ್ಗದಾಸಪುರ ಮತ್ತು ಸಿ.ವಿ.ರಾಮನ್‌ ನಗರಕ್ಕೆ ಭೇಟಿ ನೀಡಿ ಒಂದೇ ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು.

ಕಳೆದ ಆಗಸ್ಟ್‌ನಲ್ಲಿ ಈ ಎರಡೂ ಪ್ರದೇಶಗಳ ನಾಗರಿಕರು ಶಾಂತಿಯುತ ಪ್ರತಿಭಟನೆಯನ್ನೂ ನಡೆಸಿದ್ದರು. ಇಷ್ಟಾದರೂ ಪಾಲಿಕೆ ಸ್ಪಂದಿಸದೇ ಇದ್ದ ಕಾರಣ ಸಮಾನ ಮನಸ್ಕ ನಾಗರಿಕರು ಒಟ್ಟಾಗಿ ತ್ಯಾಜ್ಯ ವಿಲೇವಾರಿ ಮಾಡಿ ಸ್ಥಳವನ್ನು ಶುಚಿಗೊಳಿಸಿದ್ದಲ್ಲದೆ ಬಣ್ಣ ಬಳಿದು ಚಿತ್ತಾರ ಬಿಡಿಸಿದೆವು. ಮಕ್ಕಳು ಮತ್ತು ಹಿರಿಯ ನಾಗರಿಕರೂ ಈ ಕೆಲಸದಲ್ಲಿ ಪಾಲ್ಗೊಂಡಿದ್ದರು’ ಎಂದು ಸ್ಥಳೀಯ ಅಭಯಹಸ್ತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಅವಿನಾಶ್‌ ಎ.ಎಸ್. ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !