ಸೋಮವಾರ, ಮಾರ್ಚ್ 1, 2021
24 °C

ಶಿಷ್ಟಾಚಾರವೇ ಬೆಲ್ಜಿಯಂ ಶಿಕ್ಷಣ ವ್ಯವಸ್ಥೆ

ಶರಣಬಸಪ್ಪ ಶಿ.ಗಡೇದ Updated:

ಅಕ್ಷರ ಗಾತ್ರ : | |

Prajavani

ಆಲಮಟ್ಟಿ: ‘ಅವರದ್ದು ಡಚ್ ಪ್ರಥಮ ಭಾಷೆ. ನಮ್ಮಂತೆಯೇ ಇಂಗ್ಲಿಷ್‌ ದ್ವಿತೀಯ ಭಾಷೆ. ಅಲ್ಲಿ ಪ್ರಾರ್ಥನೆ, ಸಮವಸ್ತ್ರದ ಗೋಜಿಲ್ಲ. ಪಠ್ಯಕ್ರಮಕ್ಕೆ ಯಾರೂ ಕಟ್ಟು ಬಿದ್ದಿಲ್ಲ. ನೈತಿಕ ಶಿಕ್ಷಣ, ಶಿಷ್ಟಾಚಾರ, ಪರಿಸರ ಪ್ರೀತಿ, ಸಮರ್ಪಣಾ ಮನೋಭಾವ ಕಲಿಸುವುದೇ ಆ ದೇಶದ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ...'

ಕಲಘಟಗಿ ತಾಲ್ಲೂಕಿನ ಶಿವಪುರ ತಾಂಡಾದ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ಶಿಲ್ಪಾ ಚರಂತಿಮಠ ಅವರು ‘ಅನ್ಯ ರಾಷ್ಟ್ರಗಳಲ್ಲಿನ ಶಾಲಾ ಶಿಕ್ಷಣ ವ್ಯವಸ್ಥೆ ಹಾಗೂ ಬೆಲ್ಜಿಯಂನಲ್ಲಿ ಶೈಕ್ಷಣಿಕ ವ್ಯವಸ್ಥೆ’ ಕುರಿತು ಮಾತನಾಡಿದರು. 

'ಒಬ್ಬ ಶಿಕ್ಷಕನಿಗೆ 20 ಮಕ್ಕಳು, 2ನೇ ತರಗತಿಯಿಂದಲೇ ಕಂಪ್ಯೂಟರ್ ಬಳಕೆ. 5ನೇ ತರಗತಿಯ ಹೊತ್ತಿಗೆ ವೈಯಕ್ತಿಕ ಲ್ಯಾಪ್‌ಟಾಪ್ ಬಳಕೆ, ಸ್ಮಾರ್ಟ್‌ಕ್ಲಾಸ್ ಬೋಧನೆ ಬೆಲ್ಜಿಯಂ ಶಿಕ್ಷಣ ವ್ಯವಸ್ಥೆಯಲ್ಲಿದೆ. ಪ್ರತಿ ತರಗತಿಯಲ್ಲಿ ಪರದೆ ಮೇಲೆ ವಿವಿಧ ದೇಶಗಳ ಪ್ರಚಲಿತ ಸಂಗತಿಗಳ ಜತೆಗೆ ಮಕ್ಕಳಿಗೆ ಸಂಭಾಷಣೆ ಕೌಶಲ ಕಲಿಸಲು ಒತ್ತು ನೀಡಲಾಗುತ್ತದೆ' ಎಂದರು. 

'ಪ್ರೌಢಶಿಕ್ಷಣದಲ್ಲಿ ಅನುತ್ತೀರ್ಣತೆ ಇಲ್ಲ. 9ನೇ ತರಗತಿಗೆ ಬೇಕಾದ ಲರ್ನಿಂಗ್–ಅರ್ನಿಂಗ್ ಪದ್ಧತಿ, ಲೈಂಗಿಕ ಶಿಕ್ಷಣಕ್ಕೆ ಒತ್ತು, ಸೇಫ್ ಸೆಕ್ಸ್‌ ಕುರಿತು ಕಲಿಸಲಾಗುತ್ತದೆ' ಎಂದು ವಿವರಿಸಿದರು.

‘ಯು.ಎಸ್.ಎ ಪ್ರೌಢಶಿಕ್ಷಣ’ ಕುರಿತು ಹುಬ್ಬಳ್ಳಿ ಶಹರದ ಆನಂದ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಡಾ.ಲಿಂಗರಾಜು ರಾಮಾಪುರ ಹಾಗೂ ‘ಯುಎಸ್ಎ ಪ್ರಾಥಮಿಕ ಶಿಕ್ಷಣ’ ಕುರಿತು ಧಾರವಾಡ ಶಹರದ ಬಿಐಇಆರ್‌ಟಿ ಕೀರ್ತಿವತಿ ವಿ.ಎನ್. ಮಾತನಾಡಿದರು.

ಧಾರವಾಡದ ವಿಶ್ರಾಂತ ಪ್ರಾಚಾರ್ಯ ಡಾ.ಎನ್.ಬಿ.ಕೊಂಡಗವಾಡ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಪ್ರಭಾರ ನಿರ್ದೇಶಕ ಡಾ.ಬಿ.ಕೆ.ಎಸ್.ವರ್ದನ, ವಿದ್ಯಾ ನಾಡಿಗೇರ,  ವಿಜಯಲಕ್ಷ್ಮೀ ಶೆಟ್ಟಿ, ಶಿವಪ್ಪ ಬಿ. ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.