ಕೊಲ್ಕತ್ತಾ: ಮೂರು ತಿಂಗಳ ಬಳಿಕ ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದ್ದ ಚಂದ್ರೋದಯ (ಇಸ್ಕಾನ್) ದೇವಾಲಯದ ದ್ವಾರ ಭಾನುವಾರ ಭಕ್ತರಿಗೆ ಮುಕ್ತವಾಗಿದೆ.
ಇದು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆ (ಇಸ್ಕಾನ್) ಸಂಸ್ಥೆಯ ಕೇಂದ್ರಸ್ಥಾನವೂ ಆಗಿದೆ.
ದೇವರ ದರ್ಶನ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಿದ್ದು, ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸುವ ಸುರಂಗ ಮಾರ್ಗದ ಮೂಲಕ ಆವರಣವನ್ನು ಪ್ರವೇಶಿಸಲು ಅವಕಾಶ ಮಾಡಲಾಗಿದೆ. ಭಾನುವಾರ ಸುಮಾರು 100 ಭಕ್ತರು ದೇವರ ದರ್ಶನ ಪಡೆದರು ಎಂದು ಇಸ್ಕಾನ್ ವಕ್ತಾರಸುಬ್ರತಾ ದಾಸ್ ಅವರು ತಿಳಿಸಿದರು.
‘ಪ್ರತಿನಿತ್ಯ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ದೇವಸ್ಥಾನ ತೆರೆದಿರಲಿದೆ. ನಾವು 200 ಕ್ಕಿಂತ ಹೆಚ್ಚು ಭಕ್ತರು ಆಗಮಿಸಬಹುದು ಎಂಬ ನಿರೀಕ್ಷಿಸಿದ್ದೆವು. ಆದರೆ ಮುಂಬರುವ ದಿನಗಳಲ್ಲಿ ಹೆಚ್ಚು ಭಕ್ತರು ಆಗಮಿಸಬಹುದು. ಮಾಸ್ಕ್ ಧರಿಸಿದವರಿಗೆ ಮಾತ್ರ‘ಮುಖ್ಯ ದ್ವಾರ’ದ ಮೂಲಕ ಪ್ರವೇಶಿಸಲು ಅವಕಾಶ ಕಲ್ಪಿಸಿ ಕೊಡಲಾಗುತ್ತದೆ’ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳ ಸರ್ಕಾರವು ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ನೀಡಿದ ಒಂದು ತಿಂಗಳ ಬಳಿಕ ಚಂದ್ರೋದಯ ದೇವಸ್ಥಾನದ ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.