ಶುಕ್ರವಾರ, ಜುಲೈ 30, 2021
20 °C

ಆರ್‌ಒ ಘಟಕಗಳ ನಿಷೇಧ: ವರ್ಷಾಂತ್ಯದೊಳಗೆ ಆದೇಶ ಜಾರಿಗೆ ಎನ್‌ಜಿಟಿ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲೀಟರ್‌ನಲ್ಲಿ 500 ಮಿಲಿ ಗ್ರಾಂಗಿಂತ ಕಡಿಮೆ ಟಿಡಿಎಸ್‌ ಹೊಂದಿರುವ ನೀರು ಲಭ್ಯವಿರುವ ಪ್ರದೇಶಗಳಲ್ಲಿ ಆರ್‌ಒ ಶುದ್ಧೀಕರಣ ಯಂತ್ರಗಳ ಬಳಕೆಯನ್ನು ನಿಷೇಧಿಸುವ ಆದೇಶವನ್ನು ವರ್ಷಾಂತ್ಯದೊಳಗೆ ಹೊರಡಿಸುವಂತೆ ಕೇಂದ್ರದ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್‌ಜಿಟಿ) ಮಂಗಳವಾರ ನಿರ್ದೇಶನ ನೀಡಿದೆ.

ಕೊರೊನಾ ಪಿಡುಗಿನ ಕಾರಣದಿಂದಾಗಿ ಈ ಕುರಿತ ನೋಟಿಸ್‌ ಜಾರಿ ಮಾಡುವಲ್ಲಿ ವಿಳಂಬವಾಗಿದೆ. ಅದಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಕೇಂದ್ರವು ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಎನ್‌ಜಿಟಿ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಅವರು ಈ ನಿರ್ದೇಶನ ನೀಡಿದ್ದಾರೆ. ಆದೇಶ ಜಾರಿಗೊಳಿಸುವಲ್ಲಿ ವಿಳಂಬ ಆಗಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನ್ನ ಆದೇಶವನ್ನು ಜಾರಿ ಮಾಡಲು ನಾಲ್ಕು ತಿಂಗಳ ಅವಕಾಶ ಸಾಕು. ಆದರೆ ಸರ್ಕಾರದ ವಿಳಂಬ ಧೋರಣೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಇನ್ನೂ ವಿಳಂಬ ಮಾಡಿದರೆ ಸಂಬಂಧಪಟ್ಟ ಅಧಿಕಾರಿಯ ವೇತನವನ್ನು ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿರುವ ಎನ್‌ಜಿಟಿಯು, ಮುಂದಿನ ವಿಚಾರಣೆಯನ್ನು ಜನವರಿ 25ರಂದು ನಡೆಸುವುದಾಗಿ ಹೇಳಿದೆ.

ಖನಿಜಾಂಶಗಳಿಂದ ಮುಕ್ತವಾಗಿರುವ ನೀರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂಬ ತಜ್ಞರ ವರದಿಯ ಆಧಾರದಲ್ಲಿ 500ಎಂ.ಜಿ.ಗೂ ಕಡಿಮೆ ಟಿಡಿಎಸ್‌ ಇರುವ ನೀರು ಲಭ್ಯ ಇರುವ ಕಡೆಗೆ ಆರ್‌ಒ ಶುದ್ಧೀಕರಣ ಘಟಕಗಳ ಬಳಕೆಯನ್ನು ನಿಷೇಧಿಸಿ ಆದೇಶ ನೀಡುವಂತೆ ನ್ಯಾಯಪೀಠವು ಹಿಂದೆ ನಿರ್ದೇಶನ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು