ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌ ತೀರ್ಪಿಗೆ ಈಶಾನ್ಯ ದೆಹಲಿಯ ಮುಸ್ಲಿಂ ಮಹಿಳೆಯರ ಬೆಂಬಲ

Last Updated 17 ಜುಲೈ 2020, 10:43 IST
ಅಕ್ಷರ ಗಾತ್ರ

ನವದೆಹಲಿ: ಈಶಾನ್ಯ ದೆಹಲಿಯ ಮುಸಲ್ಮಾನರಲ್ಲಿ ಬಹುಪತ್ನಿತ್ವ ಪದ್ಧತಿ ಪ್ರಚಲಿತದಲ್ಲಿಲ್ಲ. ಆದರೂ ಸಮುದಾಯದ ಬಹುಪಾಲು ಮಹಿಳೆಯರು ತ್ರಿವಳಿ ತಲಾಖ್‌ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಬೆಂಬಲಿಸಿದ್ದಾರೆ ಎಂದು ದೆಹಲಿಯ ಅಲ್ಪಸಂಖ್ಯಾತರ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈಶಾನ್ಯ ದೆಹಲಿಯ 30 ಪ್ರದೇಶಗಳಲ್ಲಿ 600ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿದ್ದಾರೆ. ಆದರೆ, ಇಲ್ಲಿ ತ್ರಿವಳಿ ತಲಾಖ್‌ ಮತ್ತು ಬಹುಪತ್ನಿತ್ವ ಪದ್ಧತಿ ಪ್ರಚಲಿತದಲಿಲ್ಲ. ತ್ರಿವಳಿತಲಾಖ್ ನಿಷೇಧಿಸಿ ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿತ್ತು. ಈ ಬಗ್ಗೆ ಅಲ್ಲಿನ ಶೇ 90ರಷ್ಟು ಮಹಿಳೆಯರಿಗೆ ಅರಿವಿದೆ. ಅಲ್ಲದೇ ಸುಪ್ರೀಂಕೋರ್ಟ್‌ ತೀರ್ಪನ್ನು ಇವರು ಸ್ವಾಗತಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ತೀರ್ಪಿನಿಂದಾಗಿ ಮುಸ್ಲಿಂ ಮಹಿಳೆಯರಿಗೆ ಹೊಸ ಜೀವನ ತೆರೆದಂತಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಕೆಲವೊಂದು ಮಹಿಳೆಯರು ಸುಪ್ರೀಂಕೋರ್ಟ್‌ ತೀರ್ಪು ಏನೇ ಇರಲಿ. ನಮ್ಮ ಸಮುದಾಯದಲ್ಲಿ ಆಚರಿಸುವ ಪದ್ಧತಿಗಳು ಎಂದಿನಂತೆ ಮುಂದುವರಿಯುತ್ತವೆ ಎಂದಿದ್ದಾರೆ.

2017ರಲ್ಲಿ‌ ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT