ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಗುರುದ್ವಾರ ಮಸೀದಿಯಾಗಿ ಪರಿವರ್ತನೆ: ಅಮರಿಂದರ್‌ ವಿರೋಧ

Last Updated 28 ಜುಲೈ 2020, 7:30 IST
ಅಕ್ಷರ ಗಾತ್ರ

ಚಂಡೀಗಡ: ಲಾಹೋರ್‌ನಲ್ಲಿರುವ ಪ್ರಸಿದ್ಧ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸುವ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಹುತಾತ್ಮ ಭಾಯಿ ತಾರು ಸಿಂಗ್‌ ಜೀ ಅವರ ಪವಿತ್ರ ಸ್ಥಳವಾದಶ್ರೀ ಶಹೀದಿ‌ ಅಸ್ತಾನ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸುವ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದು‌ ಅವರು ಟ್ವೀಟ್‌ ಮಾಡಿದ್ದಾರೆ.

‘ಪಾಕಿಸ್ತಾನದಲ್ಲಿರುವ ಎಲ್ಲಾ ಸಿಖ್ ಪೂಜ್ಯ ಸ್ಥಳಗಳನ್ನು ಕಾಪಾಡುವಂತೆ ಪಂಜಾಬ್‌ ಒತ್ತಾಯಿಸಿದೆ ಎಂಬುದನ್ನು‍ಪಾಕಿಸ್ತಾನಕ್ಕೆ ತಿಳಿಯಪಡಿಸಿ’ ಎಂದು ಅಮರಿಂದರ್ ಸಿಂಗ್‌ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ಗೆ ಟ್ವಿಟರ್‌ ಮೂಲಕ ಮನವಿ ಮಾಡಿದ್ದಾರೆ.

ಪಾಕಿಸ್ತಾನದ ಈ ನಡೆಯ ವಿರುದ್ಧ ಸೋಮವಾರ ಭಾರತವು ತನ್ನ ರಾಯಭಾರಿ ಮೂಲಕ ಪ್ರತಿಭಟನೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT