ನವದೆಹಲಿ: ‘ಕಾಂಗ್ರೆಸ್ ಪಕ್ಷದವರು ಬಿಡುಗಡೆ ಮಾಡಿರುವ ಧ್ವನಿಮುದ್ರಿಕೆಗಳಲ್ಲಿರುವ ಧ್ವನಿ ನನ್ನದಲ್ಲ. ಈ ವಿಚಾರದಲ್ಲಿ ತನಿಖೆ ಎದುರಿಸಲು ಸಿದ್ಧ’ ಎಂದು ಕೇಂದ್ರಸಚಿವ ಗಜೇಂದ್ರಸಿಂಗ್ ಶೆಖಾವತ್ ಶುಕ್ರವಾರ ಹೇಳಿದ್ದಾರೆ.

ಗಜೇಂದ್ರಸಿಂಗ್ ಹಾಗೂ ಕಾಂಗ್ರೆಸ್‌ನ ಬಂಡಾಯ ಶಾಸಕ ಭವರ್‌ಲಾಲ್ ಶರ್ಮಾ ಅವರ ನಡುವೆ ನಡೆದ ಮಾತುಕತೆಯದ್ದು ಎನ್ನಲಾದ ಎರಡು ಧ್ವನಿಮುದ್ರಿಕೆಗಳನ್ನು ಈಚೆಗೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ‘ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಕೇಂದ್ರದ ಸಚಿವರ ಕೈವಾಡವಿದೆ’ ಎಂದು ಆರೋಪಿಸಿತ್ತು.

‘ಅದರಲ್ಲಿರುವುದು ನನ್ನ ಧ್ವನಿಯಲ್ಲ. ಆ ಬಗ್ಗೆ ತನಿಖೆಯಾಗಲಿ. ಯಾವುದೇ ವಿಚಾರಣೆ ಎದುರಿಸಲು ನಾನು ಸಿದ್ಧ’ ಎಂದು ರಾಜಸ್ಥಾನದವರೇ ಆದ ಶೆಖಾವತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.