ಶುಕ್ರವಾರ, ಆಗಸ್ಟ್ 12, 2022
25 °C
ಜನರನ್ನು ಗುರಿಯಾಗಿಸಿ ದಾಳಿ

ಪ್ಯಾರಿಸ್‌: ದುಷ್ಕರ್ಮಿಯಿಂದ ದಾಳಿ, ಚಾಕು ಇರಿತಕ್ಕೆ ಏಳು ಮಂದಿಗೆ ಗಾಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Deccan Herald

ಪ್ಯಾರಿಸ್‌: ಇಲ್ಲಿನ ಕಾಲುವೆಯೊಂದರ ಬಳಿ  ದುಷ್ಕರ್ಮಿಯೊಬ್ಬ ಚಾಕು ಹಾಗೂ ಕಬ್ಬಿಣದ ಸರಳಿನಿಂದ ಜನರ ಮೇಲೆ ದಾಳಿ ನಡೆಸಿದ್ದು, ಇಬ್ಬರು ಬ್ರಿಟಿಷ್‌ ಪ್ರವಾಸಿಗರು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ.

‘ಭಾನುವಾರ ರಾತ್ರಿ ದಾಳಿ ನಡೆದಿದೆ. ಗಾಯಾಳುಗಳ ಪೈಕಿ ನಾಲ್ವರು ತೀವ್ರ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಕೋರನನ್ನು ಬಂಧಿಸಲಾಗಿದ್ದು, ಆತ ಅಫ್ಗಾನಿಸ್ತಾನದ ಪ್ರಜೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದು ಭಯೋತ್ಪಾದಕ ದಾಳಿ ಎಂಬುದಾಗಿ ಈಗಲೇ ಹೇಳಲಾಗದು ಎಂದು ಪೊಲೀಸರು ತಿಳಿಸಿದ್ದಾರೆ.

‘ಉಕ್ಕಿನ ಚೆಂಡುಗಳನ್ನು ಎಸೆಯುವ ಮೂಲಕ ಜನರು ದುಷ್ಕರ್ಮಿಯನ್ನು ತಡೆಯಲು ಯತ್ನಿಸಿದ್ದಾರೆ. ಆದರೂ ಆತ ದಾಳಿ ಮುಂದುವರಿಸಿದ್ದ’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಾಸ್ಸಿನ್‌ ಡಿ ಲಾ ವಿಲ್ಲೆಟ್ಟೆ ಸರೋವರದ ಸಮೀಪ ದಾಳಿ ನಡೆದಿದ್ದು, ಇಲ್ಲಿನ ಕೆಫೆ ಹಾಗೂ ಸಿನಿಮಾ ಮಂದಿರಗಳಿಗೆ ಸ್ಥಳೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು