‘ಕೀಪ್‌ ಅಮೆರಿಕ ಗ್ರೇಟ್‌’ ಟ್ರಂಪ್‌ ಘೋಷವಾಕ್ಯ

ಭಾನುವಾರ, ಜೂಲೈ 21, 2019
22 °C
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮರುಸ್ಪರ್ಧೆ

‘ಕೀಪ್‌ ಅಮೆರಿಕ ಗ್ರೇಟ್‌’ ಟ್ರಂಪ್‌ ಘೋಷವಾಕ್ಯ

Published:
Updated:
Prajavani

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 2020ರಲ್ಲಿ ನಡೆಯಲಿರುವ ಚುನಾವಣಾ ಪ್ರಚಾರಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. 

ಮಂಗಳವಾರ ಫ್ಲೋರಿಡಾದಲ್ಲಿ ನಡೆದ ಮೆಗಾ ರ್‍ಯಾಲಿಯಲ್ಲಿ ಇನ್ನೂ ನಾಲ್ಕು ವರ್ಷ ‘ಕೀಪ್‌ ದಿಸ್‌ ಟೀಮ್‌ ಇನ್‌ ಪ್ಲೇಸ್‌‘(ಈ ತಂಡವನ್ನು ಹೀಗೆಯೇ ಉಳಿಸಿ)ಎಂದು ಬೆಂಬಲಿಗರಿಗೆ ಕರೆ ನೀಡಿದ ಟ್ರಂಪ್‌, ಅಮೆರಿಕವನ್ನು ಶ್ರೇಷ್ಠವಾಗಿರಿಸುವ ಭರವಸೆ ನೀಡಿದರು.

2017ರಲ್ಲಿ ಅಮೆರಿಕದ 45ನೇ ಅಧ್ಯಕ್ಷರಾಗಿ ಟ್ರಂಪ್‌ ಆಯ್ಕೆಯಾಗಿದ್ದರು. ಅಂದು ‘ಮೇಕ್‌ ಅಮೆರಿಕ ಗ್ರೇಟ್‌ ಅಗೈನ್‌‘ (ಮತ್ತೊಮ್ಮೆ ಅಮೆರಿಕವನ್ನು ಶ್ರೇಷ್ಠ ರಾಷ್ಟ್ರವಾಗಿಸೋಣ)ಎಂಬುದು ಅವರ ಘೋಷವಾಕ್ಯವಾಗಿತ್ತು.

ಆರ್ಲ್ಯಾಂಡೊದ ರ್‍ಯಾಲಿಯಲ್ಲಿ ನೆರೆದಿದ್ದ 20 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ’ನನ್ನ ಆಡಳಿತಾವಧಿಯಲ್ಲಿ ಅಮೆರಿಕದ ಆರ್ಥಿಕತೆ ಕಂಡು ವಿಶ್ವವೇ ಹೊಟ್ಟೆಕಿಚ್ಚುಪಡುತ್ತಿದೆ. ಮೂರು ವರ್ಷದ ಹಿಂದಿನ ನನ್ನ ಗೆಲುವು ಐತಿಹಾಸಿಕ. ಅಮೆರಿಕ ಫಸ್ಟ್ ಎಂಬ ನನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡು ಮುಂದುವರಿಯುತ್ತೇನೆ. ನನ್ನ ಆಡಳಿತದಲ್ಲಿ ದೇಶ ಗಮನಾರ್ಹ ಅಭಿವೃದ್ಧಿಯನ್ನು ಸಾಧಿಸಿದ್ದು, ಮುಂಬರುವ ಚುನಾವಣೆಯಲ್ಲಿ ನಾನು ಸೋತರೆ ಈಗ ಆಗಿರುವ ಅಭಿವೃದ್ಧಿಯೂ ಕುಂಠಿತವಾಗಲಿದೆ‘ ಎಂದರು.

‘ಅಮೆರಿಕ ಎಂದಿಗೂ ಸಮಾಜವಾದಿ ಧೋರಣೆಯ ರಾಷ್ಟ್ರವಾಗುವುದಿಲ್ಲ. ಕಳೆದ ಎರಡೂವರೆ ವರ್ಷದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನು ಯಾರೂ ಸಾಧಿಸಿಲ್ಲ. ಔಷಧಗಳ ದರ ಇಳಿಕೆ, ಮೆಕ್ಸಿಕೋ ಹಾಗೂ ಕೆನಡಾ ಜತೆಗಿನ ವಾಣಿಜ್ಯ ಒಪ್ಪಂದವೇ ಇದಕ್ಕೆ ಸಾಕ್ಷಿ. ಮಾಧ್ಯಮಗಳು ಹಾಗೂ ಡೆಮೊಕ್ರಟ್‌ ಪಕ್ಷದವರು ನಮ್ಮ ಈ ಚಳವಳಿ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಪ್ರಕರಣ ಹೂಡಿ, ಆಧಾರರಹಿತ ಆರೋಪಗಳನ್ನು ಮಾಡಿ ನನ್ನನ್ನು ನಾಶ ಮಾಡಲು ಪ್ರಯತ್ನಿಸಿದರು’ ಎಂದು ಆರೋಪಿಸಿದರು. 

79 ನಿಮಿಷಗಳ ಭಾಷಣದಲ್ಲಿ ಟ್ರಂಪ್‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಮೈಕ್‌ ಪೆನ್ಸಿ, ಟ್ರಂಪ್‌ ಪತ್ನಿ ಮೆಲಾನಿಯಾ ಇದ್ದರು. 2020ರ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಟ್ರಂಪ್‌ ವಿರುದ್ಧ ಸ್ಪರ್ಧಿಸಲು 24ಕ್ಕೂ ಅಧಿಕ ಡೆಮಾಕ್ರಟಿಕ್‌ ಪಕ್ಷದ ನಾಯಕರು ಆಸಕ್ತಿ ವಹಿಸಿದ್ದಾರೆ. 

**

ಟ್ರಂಪ್‌ ಆಡಳಿತಾವಧಿಯಲ್ಲಿ ಮುಸ್ಲಿಮರ ನಿಷೇಧ, ವಲಸೆ ನೀತಿ, ಆರೋಗ್ಯ ಕ್ಷೇತ್ರದಲ್ಲಿನ ಬದಲಾವಣೆಯಿಂದ ದಕ್ಷಿಣ ಏಷ್ಯಾದ ಜನರ ಜೀವನ ದುಸ್ತರವಾಗಿದೆ. ಜನ ಎರಡನೇ ಅವಕಾಶ ನೀಡುವುದಿಲ್ಲ.
-ಜಾನ್‌ ಸ್ಯಾಂತೋಸ್‌, ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !