ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಕಾಳ್ಗಿಚ್ಚು: ಪರಿಹಾರ ಕಾರ್ಯಕ್ಕೆ ₹ 9,936 ಕೋಟಿ ಮಂಜೂರು

Last Updated 6 ಜನವರಿ 2020, 14:42 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಕಾಳ್ಗಿಚ್ಚಿನಿಂದ ನಿರ್ವಸಿತರಾದವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ ₹ 9,936 ಕೋಟಿ ಮಂಜೂರು ಮಾಡುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೋಮವಾರ ಘೋಷಿಸಿದ್ದಾರೆ.

ರಾಷ್ಟ್ರೀಯ ಕಾಳ್ಗಿಚ್ಚು ನಿಯಂತ್ರಣ ಸಂಸ್ಥೆಗೆ ಹಣ ಮಂಜೂರು ಮಾಡಲಿದ್ದು, ಈ ಸಂಸ್ಥೆಯು ಜನರಿಗೆ ನೆರವಾಗಲಿದೆ ಎಂದಿದ್ದಾರೆ.

ಕಾಳ್ಗಿಚ್ಚಿನಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ, ರೈತರಿಗೆ ಮತ್ತು ವ್ಯಾಪಾರಿಗಳಿಗೆ ಈ ಮೂಲಕ ನೆರವು ನೀಡಲಾಗುವುದು ಎಂದು ಮಾರಿಸನ್‌ ತಿಳಿಸಿದ್ದಾರೆ.

‘ಪುನರ್ವಸತಿ ಕಾರ್ಯಗಳು ದೀರ್ಘ ಪ್ರಕ್ರಿಯೆಯಾಗಿದ್ದು, ಜನರೊಂದಿಗೆ ನಾವಿದ್ದೇವೆ’ ಎಂದಿದ್ದಾರೆ.

‘ಕಾಳ್ಗಿಚ್ಚು ಹಬ್ಬಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ’ ಎಂದೂ ಹೇಳಿದ್ದಾರೆ.ಕಾಳ್ಗಿಚ್ಚಿಗೆ 1,500ಕ್ಕೂ ಹೆಚ್ಚು ಮನೆಗಳು ಆಹುತಿಯಾಗಿದ್ದು, 20 ಮಂದಿ ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT