ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಡಲಗಾ ಜೈಲಿನಲ್ಲಿ ಟಿವಿ, ತಂಬಾಕು, ಸಿಮ್‌ ಕಾರ್ಡ್‌ ಪತ್ತೆ

Last Updated 17 ಏಪ್ರಿಲ್ 2018, 19:29 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ಬ್ಯಾರಕ್‌ಗಳ ಮೇಲೆ ನಗರ ಪೊಲೀಸರು ಮಂಗಳವಾರ ದಿಢೀರ್‌ ದಾಳಿ ಮಾಡಿ, ಕೈದಿಗಳು ಅಕ್ರಮವಾಗಿ ಇಟ್ಟುಕೊಂಡಿದ್ದ ಟಿ.ವಿ, ರೇಡಿಯೊ, ಸಿಮ್‌ ಕಾರ್ಡ್‌, ತಂಬಾಕು ಪೊಟ್ಟಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಿಗ್ಗೆ 7ರಿಂದ 10.30ರವರೆಗೆ ತಪಾಸಣೆ ಮಾಡಲಾಗಿದೆ. ‘ ₹1,495 ನಗದು, 1.50 ಕೆ.ಜಿ.ತಂಬಾಕು, ಗೋದಿ ಹಿಟ್ಟು, ಮ್ಯಾಗಿ ನೂಡಲ್ಸ್‌, ಒಣ ಮೀನು, ಹಪ್ಪಳ, ಅವಲಕ್ಕಿ ಹಾಗೂ ಅಡುಗೆಗೆ ಬೇಕಾಗುವ ಪಾತ್ರೆಗಳು ಪತ್ತೆಯಾಗಿದೆ’  ಎಂದು ಪೊಲೀಸ್‌ ಕಮಿಷನರ್‌ ಡಿ.ಸಿ.ರಾಜಪ್ಪ ತಿಳಿಸಿದರು.

ವಶಕ್ಕೆ ಪಡೆದ ವಸ್ತುಗಳನ್ನು ಗ್ರಾಮೀಣ ಪೊಲೀಸ್‌ ಠಾಣೆಗೆ ಹಸ್ತಾಂತರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT