ಮಂಗಳವಾರ, ಮೇ 26, 2020
27 °C
ಕೋವಿಡ್‌–19 ಪರಿಣಾಮ

ಕೋವಿಡ್‌ನಿಂದಾಗಿ ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಭಾರತದಲ್ಲಿ ಕೋವಿಡ್‌– 19 ಕಾರಣದಿಂದ ನಿರ್ದಿಷ್ಟ ಸಮಯಕ್ಕೆ ನಡೆಯಬೇಕಿದ್ದ 5,80,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ರದ್ದುಗೊಳ್ಳುವ ಇಲ್ಲವೇ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಂತರರಾಷ್ಟ್ರೀಯ ಒಕ್ಕೂಟ ನಡೆಸಿದ ಅಧ್ಯಯನವು ತಿಳಿಸಿದೆ. 

ಈ ವರದಿಯು ‘ಬ್ರಿಟಿಷ್‌ ಜರ್ನಲ್‌ ಆಫ್‌ ಸರ್ಜರಿ’ಯಲ್ಲಿ ಪ್ರಕಟವಾಗಿದ್ದು, ‘ಲಾಕ್‌ಡೌನ್‌ನಿಂದಾಗಿ 12 ವಾರಗಳ ಕಾಲ ನಿರ್ಬಂಧ ಇದ್ದಿದ್ದರಿಂದ ಆರೋಗ್ಯ ಸೇವೆಯಲ್ಲಿಯೂ ವ್ಯತ್ಯಯ ಉಂಟಾಗಿದೆ. ವಿಶ್ವದಾದ್ಯಂತ 2020ರಲ್ಲಿ ನಡೆಯಬೇಕಿದ್ದ 2.8 ಕೋಟಿ ಶಸ್ತ್ರಚಿಕಿತ್ಸೆಗಳು ಮುಂದೂಡಲ್ಪಡುತ್ತವೆ ಎಂದು ವರದಿ ತಿಳಿಸಿದೆ. 

ಶೇ 72.3ರಷ್ಟು ಶಸ್ತ್ರಚಿಕಿತ್ಸೆಗಳು ರದ್ದಾಗಲಿವೆ. ಇವೆಲ್ಲವೂ ಕ್ಯಾನ್ಸರೇತರ ಪ್ರಕರಣಗಳು ಎಂದು ಗುರುತಿಸಲಾಗಿದೆ. ವಿಶ್ವದಾದ್ಯಂತ  63 ಲಕ್ಷ ಮೂಳೆ ಸಂಬಂಧಿತ ಶಸ್ತ್ರಚಿಕಿತ್ಸೆಗಳು ರದ್ದುಗೊಳ್ಳಲಿವೆ. ಜತೆಗೆ 23 ಲಕ್ಷ ಕ್ಯಾನ್ಸರ್‌ ಸಂಬಂಧಿತ ಶಸ್ತ್ರಚಿಕಿತ್ಸೆಗಳು ವಿಳಂಬವಾಗಲಿವೆ ಎಂದು ವರದಿಯು ತಿಳಿಸಿದೆ. 

ಈ ಅಧ್ಯಯನವನ್ನು ‘ಕೋವಿಡ್‌ ಸರ್ಜ್‌’ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಕೋವಿಡ್‌ನಿಂದ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ಆದ ಪರಿಣಾಮದ ಬಗ್ಗೆ 120 ದೇಶಗಳ ಐದು ಸಾವಿರ ಶಸ್ತ್ರಚಿಕಿತ್ಸಕರಿಂದ ಮಾಹಿತಿ ಪಡೆಯಲಾಗಿದೆ. ಬ್ರಿಟನ್‌‌, ಬೆನಿನ್‌, ಘಾನಾ, ಭಾರತ, ಇಟಲಿ, ಮೆಕ್ಸಿಕೊ, ನೈಜೀರಿಯಾ, ಸ್ಪೇನ್‌, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ದೇಶಗಳ ಸದಸ್ಯರು ಈ ಅಧ್ಯಯನದ ನೇತೃತ್ವ ವಹಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು