ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌: ಸೋಂಕು ತೀವ್ರ ಪ್ರಸರಣಕ್ಕೆ ಸಂರಚನೆ ಕಾರಣ

Last Updated 6 ಮೇ 2020, 21:11 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕೊರೊನಾ ವೈರಸ್‌ ಇಷ್ಟೊಂದು ವೇಗವಾಗಿ ಹರಡಲು ಅದರ ಸಂರಚನೆಯೇ ಕಾರಣ ಎಂದು ಅಮೆರಿಕದ ಕಾರ್ನೆಲ್‌ ಯೂನಿವರ್ಸಿಟಿಯ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ಕೊರೊನಾ ವೈರಸ್‌ನ ಪ್ರಸರಣಕ್ಕೆ ತಡೆ ಹಾಕಿ, ಅದರಿಂದ ಉಂಟಾಗುವ ಸೋಂಕನ್ನು ನಾಶ ಮಾಡಲು ಪರಿಣಾಮಕಾರಿ ಔಷಧಿಯ ಸಂಶೋಧನೆಗೆ ಈ ಅಧ್ಯಯನ ನೆರವಾಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ಅಧ್ಯಯನ ವರದಿಯನ್ನು ‘ಜರ್ನಲ್‌ ಆಫ್‌ ಮಾಲೆಕ್ಯುಲಾರ್ ಬಯಾಲಜಿ’ಯಲ್ಲಿ ಪ್ರಕಟಿಸಿದ್ದಾರೆ.

ಒಂದು ವಿಧದ ಪ್ರೊಟೀನ್‌ನಿಂದಲೇ ರೂಪುಗೊಂಡಿರುವ ಈ‌ ವೈರನ್‌ನಲ್ಲಿ ಕುಣಿಕೆಯಾಕಾರದ ರಚನೆಗಳಿವೆ. ಇವುಗಳ‌ ನೆರವಿನಿಂದಲೇ ಈ ವೈರಸ್‌ ಮನುಷ್ಯನ ಜೀವಕೋಶವನ್ನು ಪ್ರವೇಶಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.

‘ನಾಲ್ಕು ವಿಧದ ಅಮೈನೊ ಆಮ್ಲಗಳಿಂದ ಈ ಪ್ರೊಟೀನ್‌ ರಚನೆಯಾಗಿದೆ.ಈ ವರೆಗೆ ಪತ್ತೆಯಾಗಿರುವ ಇದೇ ಕುಟುಂಬದ ವೈರಸ್‌ಗಳಿಗಿಂತಲೂ ಕೊರೊನಾ ವೈರಸ್‌ನಲ್ಲಿರುವ ಅಮೈನೊ ಆಮ್ಲಗಳು ಭಿನ್ನವಾಗಿವೆ. ಇಂತಹ ಭಿನ್ನ ಸಂರಚನೆಯಿಂದಾಗಿಯೇ ಈ ವೈರಸ್‌‌ ಹೆಚ್ಚು ವೇಗವಾಗಿ ಪ್ರಸರಣವಾಗುವ ಜೊತೆಗೆ, ವಿನಾಶಕಾರಿಯೂ ಆಗಿದೆ’ ಎಂದು ಕಾರ್ನೆಲ್‌ ಯೂನಿವರ್ಸಿಟಿಯ ಪ್ರಾಧ್ಯಾಪಕ ಗ್ಯಾರಿ ವಿಟ್ಕರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT