ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡನೆ

Last Updated 30 ಅಕ್ಟೋಬರ್ 2019, 20:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ವಾಗ್ದಂಡನೆಗೆ ಒಳಪಡಿಸಲು ಡೆಮಾಕ್ರಟಿಕ್‌ ಪಕ್ಷದ ಸಂಸದರು ನಿರ್ಣಯ ಮಂಡಿಸಿದ್ದಾರೆ.

ಉಕ್ರೇನ್‌ನಲ್ಲಿ ಅನಿಲ ಕಂಪನಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ ಮತ್ತು ಅವರ ಮಗ ಹಂಟರ್‌ ವಿರುದ್ಧ ಆಧಾರವಿಲ್ಲದ ಆರೋಪ ಮಾಡಿದ್ದು, ತನಿಖೆ ಮಾಡುವಂತೆ ಟ್ರಂಪ್‌ ಅವರ ವೈಯಕ್ತಿಕ ಕಾನೂನು ಸಲಹೆಗಾರ ರೂಡಿ ಗಿಲಾನಿ ಅವರು, ಉಕ್ರೇನ್‌ ಅಧಿಕಾರಿಗಳನ್ನು ಒತ್ತಾಯಿಸಿದ್ದರು ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡೆಮಾಕ್ರಟಿಕ್‌ ಪಕ್ಷ ಟ್ರಂಪ್‌ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸಲು ಕರೆ ನೀಡಿದ್ದರು.

ಎಂಟು ಪುಟಗಳ ನಿರ್ಣಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಯಿತು.

ವಿಚಾರಣೆಯ ಪ್ರಮುಖ ಪಾತ್ರವನ್ನು ಗುಪ್ತಚರ ಸಮಿತಿಯ ಅಧ್ಯಕ್ಷ ಆಡಮ್‌ ಸ್ಕಿಪ್‌ ವಹಿಸಲಿದ್ದಾರೆ. ಈ ನಿರ್ಣಯವನ್ನು ಗುರುವಾರ ಮತಕ್ಕೆ ಹಾಕುವ ನಿರೀಕ್ಷೆಯಿದೆ.

ಗುರು ನಾನಕ್ ಸ್ಮರಣಾರ್ಥ ನಾಣ್ಯ

ಇಸ್ಲಾಮಾಬಾದ್‌ (ಪಿಟಿಐ): ಗುರು ನಾನಕ್ ಅವರ 550ನೇ ಜನ್ಮದಿನದ ಸ್ಮರಣಾರ್ಥ ಪಾಕಿಸ್ತಾನ ಸರ್ಕಾರ ಬುಧವಾರ ನಾಣ್ಯ ಬಿಡುಗಡೆ ಮಾಡಿದೆ.

ಪ್ರಧಾನಿ ಇಮ್ರಾನ್‌ ಖಾನ್ ಅವರು ಫೇಸ್‌ಬುಕ್‌ ಖಾತೆಯಲ್ಲಿ ನಾಣ್ಯ ಬಿಡುಗಡೆ ಚಿತ್ರವನ್ನು ಹಂಚಿಕೊಂಡಿದ್ದಾರೆ.

ನವೆಂಬರ್ 9ರಂದು ಕರ್ತಾರಪುರ ಕಾರಿಡಾರ್ ಯೋಜನೆ ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಮುನ್ನವೇ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ.

ಬೀಜಿಂಗ್‌ ಮೆಟ್ರೊದಲ್ಲಿ ಭದ್ರತೆಗೆ ಮುಖ ತಪಾಸಣೆ

ಬೀಜಿಂಗ್‌ (ಎಎಫ್‌ಪಿ): ಮೆಟ್ರೊ ರೈಲಿಗಾಗಿ ಸರತಿ ಸಾಲಿನಲ್ಲಿ ಪ್ರಯಾಣಿಕರು ತುಂಬ ಹೊತ್ತು ಕಾಯುವುದನ್ನು ತಪ್ಪಿಸಲು ಭದ್ರತಾ ತಪಾಸಣೆ ವೇಳೆ ಮುಖ ಗುರುತಿಸುವ ತಂತ್ರಜ್ಞಾನವನ್ನು ಅಳವಡಿಸಲು ಚೀನಾ ನಿರ್ಧರಿಸಿದೆ. ಕ್ರೆಡಿಟ್‌ ಸಿಸ್ಟಮ್‌ ತಂತ್ರಜ್ಞಾನ ಬಳಸಿ ಈ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಪ್ರಸ್ತುತ ಭದ್ರತಾ ತಪಾಸಣೆ ಪ್ರಕ್ರಿಯೆಯ ನಿಧಾನವಾಗುತ್ತಿರುವುದರಿಂದ ಪ್ರಯಾಣಿಕರು ಮೆಟ್ರೊ ಸಿಬ್ಬಂದಿ ಜತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಮೆಟ್ರೊ ನಿಲ್ದಾಣ ಪ್ರವೇಶ ದ್ವಾರದ ಬಳಿಯೇ ಕ್ಯಾಮೆರಾಗಳನ್ನು ಅಳವಡಿಸಿ ತಪಾಸಣೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು ಎಂದು ರೈಲು ಸಂಚಾರ ನಿಯಂತ್ರಣ ಕೇಂದ್ರದ ನಿರ್ದೇಶಕ ಝಾನ್‌ ಮಿಂಘುಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT