ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನಿಗೆ ನಾಯಿ ಕಟ್ಟಿಕೊಂಡುಜನಪ್ರಿಯತೆ ಪಡೆದ ಮಹಿಳೆ!

Last Updated 28 ಆಗಸ್ಟ್ 2019, 17:37 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಥಾಯ್ಲೆಂಡ್‌ನ ಬೀದಿಗಳಲ್ಲಿ ನಾಯಿಯನ್ನು ಬೆನ್ನಿಗೆ ಕಟ್ಟಿಕೊಂಡು ಕಸ ಗುಡಿಸುತ್ತಿರುವ ಮಹಿಳೆಯೊಬ್ಬರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಮೆಚ್ಚುಗೆ ಗಳಿಸಿದೆ.

ಈ ನಾಯಿಯ ಹೆಸರು ಮಜ್ದಾ. ಇದರ ತೂಕ 10 ಕೆ.ಜಿ. ಇದರ ಒಡತಿತಿತಿರಾತ್ ಕಿಯೋವಾ-ರಾಮ್ ಅವರ ನಾಯಿ ಪ್ರೀತಿಗೆ ಮೆಚ್ಚುಗೆಯ ಸುರಿಮಳೆ ಹರಿದಿದೆ.

‘ನನಗೊಂದು ನಾಯಿ ಮರಿ ನೀಡುವಂತೆ ಗೆಳೆಯನ ಬಳಿ ಕೇಳಿದ್ದೆ. ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗುವುದಾದರೆ ಮಾತ್ರವೇ ಕೊಡಿಸುತ್ತೇನೆ ಎಂದು ಗೆಳೆಯ ಷರತ್ತು ಹಾಕಿದ್ದ. ನಾನು ಒಪ್ಪಿಕೊಂಡೆ. ಒಂದು ವರ್ಷದಿಂದ ನಾಯಿಯನ್ನು ಹೊತ್ತುಕೊಂಡೇ ಕಸ ಗುಡಿಸುತ್ತಿದ್ದೇನೆ’ ಎಂದು ಮಹಿಳೆ ತಿಳಿಸಿದ್ದಾರೆ.

ಕೆಲಸದ ಸ್ಥಳಕ್ಕೆ ನಾಯಿಯನ್ನು ತರುವ ಟ್ರೆಂಡ್‌ ಥಾಯ್ಲೆಂಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಅನಿಯಮಿತ ಕೆಲಸದ ಸಮಯವನ್ನು ಹೊಂದಿರುವ ಸಂಸ್ಥೆಗಳಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. ನಾಯಿ–ಸ್ನೇಹ ನೀತಿ ನೌಕರರ ಒತ್ತಡ ನಿವಾರಣೆಯ ಮಾರ್ಗ ಎಂಬ ನಂಬಿಕೆ ಅಲ್ಲಿಯ ಜನರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT