ದುಬೈನಲ್ಲಿ ಬಸ್ ಅಪಘಾತ: ಸಾವಿಗೀಡಾದ 17 ಮಂದಿಯಲ್ಲಿ 8 ಭಾರತೀಯರು

ಶುಕ್ರವಾರ, ಜೂನ್ 21, 2019
24 °C

ದುಬೈನಲ್ಲಿ ಬಸ್ ಅಪಘಾತ: ಸಾವಿಗೀಡಾದ 17 ಮಂದಿಯಲ್ಲಿ 8 ಭಾರತೀಯರು

Published:
Updated:

ದುಬೈ: ಸಂಯುಕ್ತ ಅರಬ್ ರಾಷ್ಟ್ರದಲ್ಲಿ ರಸ್ತೆ ಸೂಚನ ಫಲಕಕ್ಕೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಎಂಟು ಮಂದಿ ಭಾರತೀಯರು ಎಂದು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ.

ಒಮಾನ್‌ನಿಂದ ದುಬೈಗೆ ಬರುತ್ತಿದ್ದ ಬಸ್ ಗುರುವಾರ ಸಂಜೆ ಅಪಘಾತಕ್ಕೀಡಾಗಿತ್ತು.

ದುಬೈ ಬಸ್ ಅಪಘಾತದಲ್ಲಿ  8 ಭಾರತೀಯರು ಸಾವಿಗೀಡಾಗಿದ್ದಾರೆ. ಸಾವಿಗೀಡಾದವರ ಕುಟುಂಬದವರನ್ನು  ರಾಯಭಾರಿ ಕಚೇರಿ ಸಂಪರ್ಕಿಸಿದ್ದು, ಇನ್ನು ಕೆಲವು ಕುಟುಂಬದವರಿಗೆ ತಿಳಿಸಲು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ಅಪಘಾತದಲ್ಲಿ ಸಾವಿಗೀಡಾದವರು -ರಾಜಗೋಪಾಲನ್, ಫಿರೋಜ್ ಖಾನ್ ಪಠಾಣ್, ರೇಷ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್,  ಕಿರಣ್ ಜಾನಿ, ವಾಸುದೇವ್ ಮತ್ತು ತಿಲಕ್‌ರಾಮ್ ಜವಾಹರ್ ಠಾಕೂರ್ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಗಾಯಗೊಂಡ ನಾಲ್ಕು ಮಂದಿ ಭಾರತೀಯರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳಿಸಿಕೊಟ್ಟಿದ್ದು  ಮೂವರು ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಭಾರಿ ಕಚೇರಿ ಮೊದಲು ಟ್ವೀಟ್ ಮಾಡಿತ್ತು.

ವರದಿಗಳ ಪ್ರಕಾರ, ಒಮಾನ್ ಸರ್ಕಾರದ ಬಸ್ ಮಸಲತ್ ಗುರುವಾರ ಸಂಜೆ 6 ಗಂಟೆಗೆ ಶೇಖ್ ಮೊಹಮ್ಮದ್  ಬಿನ್ ಜಾಯದ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ.
 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 6

    Happy
  • 1

    Amused
  • 9

    Sad
  • 0

    Frustrated
  • 0

    Angry

Comments:

0 comments

Write the first review for this !