ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: 61 ಎನ್‌ಟಿಜೆ ಉಗ್ರರ ಬಂಧನ ಅವಧಿ ವಿಸ್ತರಣೆ

Last Updated 30 ಜನವರಿ 2020, 20:00 IST
ಅಕ್ಷರ ಗಾತ್ರ

ಕೊಲಂಬೊ: ಕಳೆದ ವರ್ಷದಈಸ್ಟರ್‌ ಹಬ್ಬದಂದು ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ವಶದಲ್ಲಿರುವ 61 ಮಂದಿ ಉಗ್ರರ ಬಂಧನವನ್ನು ಫೆಬ್ರುವರಿ 12ರ ವರೆಗೆ ವಿಸ್ತರಿಸಿಬೆಟಿಕೋಲಾ ಹೈಕೋರ್ಟ್ ಗುರುವಾರ ಆದೇಶ ನೀಡಿದೆ.

ಕಳೆದ ಏಪ್ರಿಲ್‌ 21 ರಂದು ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ ಎಂಟು ಮಂದಿ ಭಾರತೀಯರು ಸೇರಿ 258 ಮಂದಿ ಮೃತಪಟ್ಟಿದ್ದರು.

61 ಮಂದಿ ಬಂಧಿತರೆಲ್ಲರೂ ಸ್ಥಳೀಯ ಸಂಘಟನೆ ನ್ಯಾಷನಲ್‌ ತೌಹೀದ್‌ ಜಮಾಅತ್‌ (ಎನ್‌ಟಿಜೆ) ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 300 ಮಂದಿ ಶಂಕಿತರನ್ನು ಬಂಧಿಸಲಾಗಿದೆ.

ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಈ ದಾಳಿಯ ಹೊಣೆಯನ್ನು ಹೊತ್ತಿದ್ದರು. ಆದರೆ, ಶ್ರೀಲಂಕಾ ಸರ್ಕಾರ ಎನ್‌ಟಿಜೆ ಉಗ್ರರೇ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದೆ. 2019ರ ಏಪ್ರಿಲ್‌ 27 ರಂದು ಎನ್‌ಟಿಜೆ ಅನ್ನು ಉಗ್ರ ಸಂಘಟನೆ ಎಂದು ಘೋಷಿಸಿ, ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT