ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನ 50 ಶ್ರೇಷ್ಠ ಎಂಜಿನಿಯರ್‌ ಮಹಿಳೆಯರಲ್ಲಿ ಭಾರತ ಸಂಜಾತದ ಐವರು

Last Updated 24 ಜೂನ್ 2020, 7:24 IST
ಅಕ್ಷರ ಗಾತ್ರ

ಲಂಡನ್‌: ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಬ್ರಿಟನ್‌ನ 50 ಶ್ರೇಷ್ಠ ಮಹಿಳೆಯರ ಪಟ್ಟಿಯಲ್ಲಿ ಬ್ರಿಟನ್‌ ಅಣುಶಕ್ತಿ ಪ್ರಾಧಿಕಾರದ ಚಿತ್ರಾ ಶ್ರೀನಿವಾಸನ್‌ ಸೇರಿದಂತೆ ಭಾರತ ಸಂಜಾತ ಐವರು ಎಂಜಿನಿಯರ್‌ಗಳು ಸ್ಥಾನ ಪಡೆದಿದ್ದಾರೆ.

2020ರ ಸಾಲಿಗೆ ಈ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಲಾಗಿದೆ. ಸಾರಿಗೆ ಎಂಜಿನಿಯರ್‌ ರೀತು ಗರ್ಗ್‌, ಭೂಕಂಪದ ಕುರಿತು ಅಧ್ಯಯನ ಕೈಗೊಂಡಿರುವ ಎಂಜಿನಿಯರ್‌ ಬರ್ನಾಲಿ ಘೋಷ್‌, ಹವಾಮಾನ ಬದಲಾವಣೆ ಕುರಿತ ತಜ್ಞೆ ಅನುಷಾ ಶಾ ಮತ್ತು ಹಿರಿಯ ಎಂಜಿನಿಯರ್‌ ಕುಸುಮಾ ತ್ರಿಖಾ ಅವರು ಇತರ ಎಂಜಿನಿಯರ್‌ಗಳು.

ಮಹಿಳಾ ಎಂಜಿನಿಯರಿಂಗ್‌ ದಿನಾಚರಣೆ ಅಂಗವಾಗಿ ಈ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಉದ್ಯಮ ವಲಯದ ತಜ್ಞರು ಈ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT