ಶನಿವಾರ, ಜನವರಿ 18, 2020
19 °C

ನೀನು ಸಖತ್‌ ಹಾಟ್‌, ಕಿಸ್ ಮಾಡೋಣ ಕಚೇರಿಗೆ ಬಾ... ಟ್ರಂಪ್‌ ಕರೆದದ್ದು ಯಾರನ್ನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು, ನೀನು ಸಖತ್‌ ಹಾಟ್‌, ಕಿಸ್ ಮಾಡೋಣ ಕಚೇರಿಗೆ ಬಾ ಎಂದು ಫಾಕ್ಸ್‌ ಸುದ್ದಿವಾಹಿನಿಯ ಮಾಜಿ ನಿರೂಪಕಿಯನ್ನು ಕರೆದಿದ್ದರಂತೆ!

ಹೌದು, ನಿರೂಪಕಿ ಕರ್ಟನಿ ಫ್ರೈಲ್‌ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಕರ್ಟನಿ ಫ್ರೈಲ್‌ ಅವರು ಬರೆದಿರುವ ‘ಟುನೈಟ್‌ ಅಟ್‌ 10: ಕಿಕ್ಕಿಂಗ್‌ ಬೂಜ್‌ ಆ್ಯಂಡ್‌ ಬ್ರೇಕಿಂಗ್‌ ನ್ಯೂಸ್‌‘ ಪುಸ್ತಕದಲ್ಲಿ ಈ ಅಂಶವನ್ನು ದಾಖಲಿಸಿದ್ದಾರೆ.

ಆಗಿನ್ನು ಟ್ರಂಪ್‌ ಅವರು ಅಧ್ಯಕ್ಷರಾಗಿರಲಿಲ್ಲ, ನಾನು ಫಾಕ್ಸ್‌ ನ್ಯೂಸ್‌ನಲ್ಲಿ ಕೆಲಸ ಮಾಡುವಾಗ ಫೋನ್‌ ಕಾಲ್‌ ಮೂಲಕ ನನ್ನನ್ನು ಅವರ ಕಚೇರಿಗೆ ಕರೆದಿದ್ದರು. ನೀನು ಸಖತ್ ಹಾಟ್‌ ಆಗಿದ್ದೀಯ ನನ್ನ ಕಚೇರಿಗೆ ಬಾ ಕಿಸ್‌ ಮಾಡೋಣ ಎಂದು ಕರೆದಿದ್ದರು. ಅದಕ್ಕೆ ನಾನು ನಮ್ಮಿಬ್ಬರಿಗೂ ಈಗಾಗಲೇ ಮದುವೆಯಾಗಿದೆ ಎಂದು ಹೇಳಿ ಅವರ ಫೋನ್ ಕಟ್‌ ಮಾಡಿದ್ದೆ ಎಂದು 39ರ ಹರೆಯದ ಫ್ರೈಲ್‌ ಬರೆದುಕೊಂಡಿದ್ದಾರೆ. 

‘ಟುನೈಟ್‌ ಅಟ್‌ 10: ಕಿಕ್ಕಿಂಗ್‌ ಬೂಜ್‌ ಆ್ಯಂಡ್‌ ಬ್ರೇಕಿಂಗ್‌ ನ್ಯೂಸ್‌‘ ಪುಸ್ತಕ ಮುಂದಿನವಾರ ಬಿಡುಗಡೆಯಾಗಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು