ಮಂಗಳವಾರ, ಜುಲೈ 14, 2020
28 °C

ಕೊರೊನಾ ವೈರಸ್‌ ವಂಶವಾಹಿ ವಿವರ ಭೇದಿಸಿದ ವಿಜ್ಞಾನಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

ಟೊಕಿಯೊ: ಕೊರೊನಾ ವೈರಸ್‌ನ ವಂಶವಾಹಿ ವಿವರಗಳನ್ನು ಭೇದಿಸಿರುವುದಾಗಿ ಟೊಕಿಯೊ ವಿಶ್ವವಿದ್ಯಾಲಯದ ವಿಜ್ಞಾನಿ ನೊಬುಯೊಸಿ ಅಕಿಮಿತ್ಸು ಹೇಳಿದ್ದಾರೆ.

ಕೊರೊನಾ ವೈರಸ್‌ ಮಾನವನ ದೇಹವನ್ನು ಸೇರಿದ ನಂತರ ತನ್ನ ಸಂಖ್ಯೆಯನ್ನು ವೃದ್ದಿಸುವ ಬಗೆ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೇಗೆ ನಿಷ್ಕ್ರಿಯಗೊಳಿಸುತ್ತದೆ ಎಂಬುದನ್ನು ನಿಖರವಾಗಿ ಅಧ್ಯಯನ ಮಾಡಲು ಈ ವಿವರಗಳು ನೆರವಾಗಲಿವೆ. ಜೊತೆಗೆ, ಕೋವಿಡ್‌–19ಗೆ ಪರಿಣಾಮಕಾರಿ ಔಷಧಿ ಕಂಡುಹಿಡಿಯಲು ಸಹ ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಇನ್‌ಫ್ಲೂಯೆಂಜಾ ವೈರಸ್‌, ಕೊರೊನಾ ವೈರಸ್‌ ಹಾಗೂ ಈ ಕುಟುಂಬಗಳಿಗೆ ಸೇರಿದ ಇತರ ಸೂಕ್ಷ್ಮಾಣು ಜೀವಿಗಳ ವಂಶವಾಹಿ ವಿವರಗಳು ‘ಆರ್‌ಎನ್‌ಎ’ಯಲ್ಲಿ ಅಡಕವಾಗಿರುತ್ತವೆ. ಮಾನವ ದೇಹದ ಜೀವಕೋಶಗಳನ್ನು ಸೇರಿದ ವೈರಸ್‌ಗಳ ಸಂಖ್ಯೆ ವೃದ್ಧಿಯಾಗಲು ಈ ಆರ್‌ಎನ್‌ಎ ನೆರವಾಗುತ್ತದೆ‘ ಎಂದೂ ಅಮಿಮಿತ್ಸು ಹೇಳುತ್ತಾರೆ.

‘ಜೀವಕೋಶದೊಳಗೆ ಈ ವೈರಸ್‌ ನೆಲೆಗೊಳ್ಳಬೇಕಾದರೆ ಅವುಗಳಿಗೆ ಆರ್‌ಎನ್‌ಎ ಅಗತ್ಯ. ಹೀಗಾಗಿ ದೇಹದ ರೋಗನಿರೋಧಕ ಶಕ್ತಿಯಿಂದಾಗಿ ಆರ್‌ಎನ್‌ಎ ಕ್ಷೀಣಿಸದಿರುವಂತೆ ನೋಡಿಕೊಳ್ಳಲು ವೈರಸ್‌ಗಳು ಯತ್ನಿಸುತ್ತವೆ’ ಎಂದು ಬಯೋಕೆಮಿಕಲ್‌ ಆ್ಯಂಡ್‌ ಬಯೋಫಿಸಿಕಲ್‌ ರಿಸರ್ಚ್‌ ಕಮ್ಯುನಿಕೇಷನ್ಸ್‌ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು