ಮಂಗಳವಾರ, ಜೂನ್ 2, 2020
27 °C

ಕೊರೊನಾ ತಲ್ಲಣ: ವಿಶ್ವದಾದ್ಯಂತ 7 ಲಕ್ಷ ದಾಟಿದ ಸೋಂಕು ಪೀಡಿತರ ಸಂಖ್ಯೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Coronavirus

ಪ್ಯಾರಿಸ್‌: ಜಾಗತಿಕವಾಗಿ ಕೊರೊನಾ ವೈರಸ್‌ (ಕೋವಿಡ್–19) ಸೋಂಕಿಗೆ ಒಳಗಾದವರ ಸಂಖ್ಯೆ ಅಧಿಕೃತವಾಗಿ 7 ಲಕ್ಷ ದಾಟಿದ್ದು, ಇನ್ನಷ್ಟು ವ್ಯಾಪಕವಾಗುತ್ತಿದೆ.

ವಿಶ್ವದ 183 ರಾಷ್ಟ್ರಗಳಲ್ಲಿ ಸೋಂಕು ಪೀಡಿತರ ಒಟ್ಟು ಸಂಖ್ಯೆ (ಅಧಿಕೃತ) 7,15,204 ಆಗಿದ್ದು, 33,568 ಜನರು ಈವರೆಗೆ ಮೃತಪಟ್ಟಿದ್ದಾರೆ. ಇನ್ನು ಕೆಲವು ಮೂಲಗಳ ಪ್ರಕಾರ, ಸೋಂಕು ಪೀಡಿತರ ಸಂಖ್ಯೆ 7,40,000 ತಲುಪಿದ್ದು, 1,56,000 ಮಂದಿ ಗುಣಮುಖರಾಗಿದ್ದಾರೆ. 35,000 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ

ಇಟಲಿ ಮತ್ತು ಅಮೆರಿಕದಲ್ಲಿ ಸೋಂಕಿನ ಪರಿಣಾಮ ತೀವ್ರವಾಗಿದೆ. ನ್ಯೂಯಾರ್ಕ್‌ನಲ್ಲಿ ಒಂದೇ ದಿನ 237 ಜನ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ‘ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸಿಂಗ್)’ ಕಾಯ್ದುಕೊಳ್ಳುವ ಮಾರ್ಗಸೂಚಿಗಳನ್ನು ಏಪ್ರಿಲ್‌ 30ರ ವರೆಗೆ ವಿಸ್ತರಿಸಲಾಗಿದೆ.

ಸ್ಪೇನ್‌ನಲ್ಲಿ 24 ಗಂಟೆಗಳಲ್ಲಿ 812 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 7,340ಕ್ಕೆ ಏರಿಕೆಯಾಗಿದೆ. ಇಟಲಿಯ ನಂತರ ಅತಿ ಹೆಚ್ಚು ಸಾವು ಸ್ಪೇನ್‌ನಲ್ಲಿ ಸಂಭವಿಸಿದೆ. ಇರಾನ್‌ನಲ್ಲಿ 117 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ 31 ಪ್ರಕರಣಗಳು ಭಾನುವಾರ ಪತ್ತೆಯಾಗಿವೆ.

ಈ ಮಧ್ಯೆ, ಕೋವಿಡ್‌–19) ಮೊದಲಿಗೆ ಪತ್ತೆಯಾಗಿದ್ದ ಚೀನಾದ ವುಹಾನ್‌ ನಗರದಲ್ಲಿ ಸೋಮವಾರ ವಾಣಿಜ್ಯ ಚಟುವಟಿಕೆ ಪುನರಾರಂಭವಾಗತೊಡಗಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು